ಚಿಕ್ಕಬಳ್ಳಾಪುರ: ಕಾಂಗ್ರೆಸ್ ಅಭ್ಯರ್ಥಿಯ ಪರ ಮತಯಾಚನೆ ನಡೆಸುವ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೆಜಿಎಫ್ ಬಾಬು ಯಾರು ಅಂತಾನೇ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ನಡೆಸಿದ ರಮೇಶ್ ಕುಮಾರ್, ನನಗೆ ಕೆಜಿಎಫ್ ಬಾಬು ನನಗೆ ಯಾರು ಅಂತಾ ಗೊತ್ತಿಲ್ಲ. ಅವರಿಗೆ ಎಬಿಸಿಡಿ ಬರುತ್ತೋ ಅ ಆ ಇ ಈ ಬರುತ್ತೋ ಗೊತ್ತಿಲ್ಲ. ನನಗೆ ಮಾತ್ರ ಅ ಆ ಇ ಈ ಬರುತ್ತೆ ಎಂದು ಹೇಳಿಕೆ ನೀಡಿದ್ದಾರೆ.
ಬಿಜೆಪಿಯವರ ಕೆಲಸ ಅವರದು, ನಮ್ಮ ಕೆಲಸ ನಮ್ಮದು. ಇನ್ನೂ ಕಳೆದ ಎರಡು ದಿನಗಳ ಹಿಂದೆ ದೇವೇಗೌಡರು ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಿದ ವೇಳೆ ರಮೇಶ್ ಕುಮಾರ್ ಅವರ ಬಗ್ಗೆ ಕಿಡಿಕಾರಿದ್ದರು. ಈ ಬಗ್ಗೆ ಮಾತನಾಡಿದ ರಮೇಶ್ ಕುಮಾರ್, ದೇವೇಗೌಡ್ರು ಅಂದ್ರೆ ತಮಾಷೆನಾ. ದೇಶದ ಪ್ರಧಾನಿಯಾಗಿದ್ದವರು, ದೊಡ್ಡವರ ಬಗ್ಗೆ ನಾನು ಮಾತನಾಡಲ್ಲ, ನಾನು ಇನ್ನು ಅಷ್ಟು ಎತ್ತರಕ್ಕೆ ಬೆಳದಿಲ್ಲ ಅವರು ಏನೇ ಅಂದ್ರು ನಮಗೆ ಆಶೀರ್ವಾದ ಎಂದರು.