ಬೆಂಗಳೂರು: ಸಾಮಾಜಿಕ ಉದ್ದೇಶದಿಂದ ಒಂದು ಜಗತ್ತು, ಒಂದು ಕುಟುಂಬ ಪರಿಕಲ್ಪನೆಯಡಿ ಸದ್ಗುರು ಮಧುಸೂದನ್ ಸಾಯಿ ಗ್ಲೋಬಲ್ ಹುಮ್ಯಾನಿಟೇರಿಯನ್ ಮಿಷನ್ ವತಿಯಿಂದ ಗುರುವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಸತ್ಯಸಾಯಿ ಗ್ರಾಮದ ಕೃಷ್ಣ ಕ್ರೀಡಾಂಗಣದಲ್ಲಿ ಟಿ-20 ಪಂದ್ಯ ಹಮ್ಮಿಕೊಳ್ಳಲಾಗಿದೆ.
ಅಪೌಷ್ಠಿಕತೆ ತೊಲಗಿಸಲು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ತಮ್ಮದೇ ರೀತಿಯಲ್ಲಿ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸತ್ಯಸಾಯಿ ಟ್ರಸ್ಟ್, ವಸುದೈವಂ ಕುಟುಂಬದ ಸಂದೇಶ ಸಾರಲು ಕ್ರಿಕೆಟ್ ಮೂಲಕ ಒಂದಾಗಿಸಲು ಮುಂದಾಗಿದೆ. ಪಂದ್ಯದ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹಾಗೂ ಮಿಷನ್ ಮುಖ್ಯಸ್ಥರಾದ ಶ್ರೀ ಮಧುಸೂದನ್ ಸಾಯಿ ಜಂಟಿ ಮಾಧ್ಯಮ ಸಂವಾದ ಹಮ್ಮಿಕೊಂಡು ಕ್ರಿಕೆಟ್ ಪಂದ್ಯದ ಹಿಂದಿನ ಉದ್ದೇಶ-ಭವಿಷ್ಯದ ಯೋಜನೆ ಹಾಗೂ ಅದರ ಸಾಕಾರ ಬಗ್ಗೆ ವಿಸ್ತಾರವಾಗಿ ಹಂಚಿಕೊಂಡರು.
ಮೊದಲಿಗೆ ಸುನಿಲ್ ಗವಾಸ್ಕರ್ ಮಾತನಾಡಿ, ''ಒಂದು ಜಗತ್ತು-ಒಂದು ಕುಟುಂಬದ ಕಲ್ಪನೆಯಡಿ ನಾಳೆ ಪಂದ್ಯ ಆಯೋಜಿಸಲಾಗಿದೆ. ಒಂದು ವರ್ಲ್ಡ್ ತಂಡಕ್ಕೆ ಸಚಿನ್ ತೆಂಡೂಲ್ಕರ್, ಒನ್ ಕುಟುಂಬದ ತಂಡಕ್ಕೆ ಯುವರಾಜ್ ಸಿಂಗ್ ನಾಯಕರಾಗಿದ್ದಾರೆ. ಎರಡು ತಂಡಗಳು ಸೆಣಸಾಡಲಿದ್ದು ದೇಶ ಹಾಗೂ ಅಂತಾರಾಷ್ಟ್ರೀಯ ಖ್ಯಾತ ಮಾಜಿ ಆಟಗಾರರು ಭಾಗಿಯಾಗುತ್ತಿದ್ದಾರೆ. ಕ್ರೀಡೆ ಹಾಗೂ ಸಂಗೀತ ಎಲ್ಲರನ್ನು ಒಂದುಗೂಡಿಸುವ ಶಕ್ತಿಯಿದೆ. ಅದೇ ರೀತಿ ಜನಪ್ರಿಯಗೊಂಡಿರುವ ಕ್ರಿಕೆಟ್ ಆಟದ ಮೂಲಕ ಒನ್ ವರ್ಲ್ಡ್, ಒನ್ ಪ್ಯಾಮಿಲಿ ಪರಿಕಲ್ಪನೆಯಡಿ ಬರುತ್ತಿದ್ದೇವೆ'' ಎಂದರು.
''ಸಮಾಜದ ಸಮಸ್ಯೆಗಳಿಗೆ ಕ್ರಿಕೆಟ್ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗುತ್ತಿರುವುದು ಖುಷಿ ತಂದಿದೆ. ಶ್ರೀ ಮಧುಸೂಧನ್ ಸಾಯಿ ಮಾತನಾಡಿ ಒನ್ ವರ್ಲ್ಡ್ ಒನ್ ನೇಷನ್ಗೆ ಪರಿಕಲ್ಪನೆಗೆ ಸುನಿಲ್ ಗವಾಸ್ಕರ್ ಅವರು ಕೈ ಜೋಡಿಸಿರುವುದು ಖುಷಿತಂದಿದೆ. ಸದ್ದುದ್ದೇಶದಿಂದ ಕೂಡಿರುವ ಪಂದ್ಯ ಆಯೋಜಿಸಿ ಸಮಾಜದ ಉದ್ದಾರಕ್ಕೆ ಕೈ ಹಾಕಿರುವುದು ಇದು ಅವರ ಜೀವನದ ಮೂರನೇ ಇನ್ಸಿಂಗ್ ಆಗಿದೆ. ಒಂದು ಜಗತ್ತು, ಒಂದೇ ಕುಟುಂಬದ ಸಂದೇಶ ಸಾರುವುದೇ ಕ್ರಿಕೆಟ್ ಪಂದ್ಯ ಆಯೋಜನೆ ಹಿಂದಿನ ತಿರುಳಾಗಿದೆ'' ಎಂದು ಗವಾಸ್ಕರ್ ಹೇಳಿದರು.
''ದೇಶದಲ್ಲಿ ಕ್ರಿಕೆಟ್ ಇಂದು ಆಟವಾಗಿ ಉಳಿದಿಲ್ಲ. ಧರ್ಮವಾಗಿ ಬೆಳೆದಿದೆ. ಭಾರತದಂತಹ ದೇಶದಲ್ಲಿ ಕ್ರಿಕೆಟಿಗರು ಬರೀ ಕೇವಲ ಆಟಗಾರರಲ್ಲ. ಸಂಸ್ಕತಿ, ಪರಂಪರೆಯ ರಾಯಭಾರಿ ಆಗಿರಲಿದ್ದಾರೆ. ಪೌಷ್ಟಿಕತೆ ಆಹಾರ ಸೇವನೆ, ಶಿಕ್ಷಣ, ಅರೋಗ್ಯ ಪ್ರತಿಯೊಬ್ಬರ ಮೂಲ ಹಕ್ಕಾಗಿದೆ. ಭಾರತ ಮಾತ್ರವಲ್ಲದೇ ವಿಶ್ವದ ಎಲ್ಲರಿಗೂ ಪೌಷ್ಟಿಕತೆ, ಆರೋಗ್ಯ, ಶಿಕ್ಷಣ ಪಡೆಯಬೇಕು'' ಎಂಬ ಉದ್ದೇಶವಾಗಿದೆ ಎಂದರು.
''ಅಪೌಷ್ಟಿಕತೆ ತೊಲಗಿಸುವ ನಿಟ್ಟಿನಲ್ಲಿ ದೇಶದ 24 ರಾಜ್ಯ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೌಷ್ಠಿಕ ಆಹಾರ ಒದಗಿಸುವ ಕೆಲಸ ಮಾಡಲಾಗುತ್ತಿದೆ. 40 ಸಾವಿರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಲಕ್ಷಾಂತರ ಮಂದಿಗೆ ಉಚಿತವಾಗಿ ವೈದ್ಯಕೀಯ ಸೇವೆ ನೀಡಲಾಗಿದೆ. ಮುಖ್ಯವಾಗಿ ಪೌಷ್ಠಿಕ ಆಹಾರ, ಶಿಕ್ಷಣ ಹಾಗೂ ಆರೋಗ್ಯ ಎಲ್ಲರಿಗೂ ಸಿಗಬೇಕು'' ಎಂಬ ಆಶಯ ವ್ಯಕ್ತಪಡಿಸಿದರು.
''ಕ್ರೀಡಾ ಗ್ರಾಮ ಮಾಡಲು ಚಿಂತನೆ ಕೋಟ್ಯಂತರ ವೆಚ್ಚದಲ್ಲಿ ಸತ್ಯಸಾಯಿ ಗ್ರಾಮದಲ್ಲಿ ಕ್ರೀಡಾಂಗಣ ನಿರ್ಮಿಸಲಾಗಿದೆ. ಯುವ ಕ್ರಿಕೆಟಿಗರನ್ನ ಉತ್ತೇಜಿಸಲು 19 ವರ್ಷದೊಳಗಿನವರ ಹಾಗೂ ಕ್ಲಬ್ ಮಟ್ಟದ ಪಂದ್ಯ ಆಯೋಜನೆಗೆ ಮುಂದಾದರೆ ಉಚಿತವಾಗಿ ಸ್ಟೇಡಿಯಂ ನೀಡಲಾಗುವುದು. ಮುಂದಿನ ದಿನಗಳಲ್ಲಿ ಪುಟ್ಬಾಲ್, ವಾಲಿಬಾಲ್, ಬಾಡ್ಮಿಂಟನ್ ಸ್ಟೇಡಿಯಂ ಸೇರಿ ಇನ್ನಿತರ ಕ್ರೀಡೆಯ ಕ್ರೀಡಾಂಗಣಗಳನ್ನ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭಾನ್ವಿತರನ್ನ ಉತ್ತೇಜಿಸಲು ಕ್ರೀಡಾಗ್ರಾಮ ನಿರ್ಮಾಣ ಮಾಡುವ ಚಿಂತನೆ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು. ಪ್ರತಿಭಾನ್ವಿತ ಯುವ ಆಟಗಾರರಿಗೂ ಎಲ್ಲಾ ತರಹದ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ದಕ್ಷಿಣ ಭಾರತ ಮಾತ್ರವಲ್ಲದೆ ಭವಿಷ್ಯದಲ್ಲಿ ಉತ್ತರ ಭಾರತದಲ್ಲಿಯೂ ಸಾಮಾಜಿಕ ಸೇವೆ ನೀಡುವ ಉದ್ದೇಶ ಹೊಂದಲಾಗಿದೆ'' ಎಂದರು.
ಇದನ್ನೂ ಓದಿ: ಆಲ್ರೌಂಡರ್ ದೀಪ್ತಿ ಶರ್ಮಗೆ ಐಸಿಸಿ ಮಾಸಿಕ ಕ್ರಿಕೆಟರ್ ಪ್ರಶಸ್ತಿ