ಬಾಗೇಪಲ್ಲಿ(ಚಿಕ್ಕಬಳ್ಳಾಪುರ) : ಬಡವರಿಗೆ, ನಿರ್ಗತಿಕರಿಗೆ ಎಸ್. ಎನ್.ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಪಹಾರದ ಪ್ಯಾಕ್ ಹಾಗೂ ಶುದ್ಧ ನೀರನ್ನು ವಿತರಿಸುವ ಕಾರ್ಯಕ್ಕೆ ಬಿಳ್ಳರು ಆಂಜನೇಯ ಸ್ವಾಮಿ ಟ್ರಸ್ಟ್ ಅಧ್ಯಕ್ಷ ಹಾಗೂ ಸಮಾಜ ಸೇವಕರಾದ ನಾಗರಾಜ್ ಚಾಲನೆ ನೀಡಿದರು.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶದಾದ್ಯಂತ 21 ದಿನ ಲಾಕ್‌ಡೌನ್ ಮಾಡಲಾದ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬಡ ಜನರಿಗೆ ಇಲ್ಲಿನ ಬಾಗೇಪಲ್ಲಿ ಪಟ್ಟಣದ ಎಸ್. ಎನ್.ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ ನೀರು, ಆಹಾರ ಪೂರೈಸಿದರು.
ಸುಮಾರು 250ಕ್ಕೂ ಅಧಿಕ ಜನರಿಗೆ ಸಿದ್ಧಪಡಿಸಿದ ಆಹಾರ ಹಾಗೂ ಶುದ್ಧ ನೀರಿನ ಬಾಟಲ್ ಸರಬರಾಜು ಮಾಡುವ ಮೂಲಕ ಮಾನವೀಯತೆ ಮೆರೆದು, ಹಸಿದವರಿಗೆ ಆಹಾರ ಪೂರೈಕೆ ಮಾಡಿದರು.