ETV Bharat / state

ಎಲ್ಲೋಡು ಬೆಟ್ಟಕ್ಕೆ ಬೆಂಕಿ.. ಅಪಾರ ಪ್ರಮಾಣದ ಜೀವರಾಶಿ ನಾಶ - enormous amount of biomass

ಸೀಗರೇಟು ಸೇದಿ ಬೆಟ್ಟದ ಭಾಗದಲ್ಲಿ ಬೀಸಾಡಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದ್ದು, ಕಿಡಿಗೇಡಿಗಳಿಗಾಗಿ ಹುಡಕಾಟ ಮುಂದುವರೆದಿದೆ..

ಜೀವರಾಶಿ ನಾಶ
ಜೀವರಾಶಿ ನಾಶ
author img

By

Published : Mar 19, 2021, 10:16 PM IST

ಗುಡಿಬಂಡೆ : ತಾಲೂಕಿನ ಐತಿಹಾಸಿಕ ಹಿನ್ನೆಲೆಯುಳ್ಳ ಎಲ್ಲೋಡು ಆದಿನಾರಾಯಣಸ್ವಾಮಿ ಬೆಟ್ಟಕ್ಕೆ ಕಳೆದ ರಾತ್ರಿ ಬೆಂಕಿ ಬಿದ್ದಿದ್ದು, ಅಪಾರ ಪ್ರಮಾಣದ ಜೀವರಾಶಿ ಹಾಗೂ ಅಪರೂಪದ ಸಸ್ಯ ಸಂಕುಲ ಬೆಂಕಿಗೆ ಆಹುತಿಯಾಗಿದೆ.

ಬೆಟ್ಟದಲ್ಲಿ ಕಳೆದ ರಾತ್ರಿ ಸುಮಾರು 9.30ರ ಸಮಯದಲ್ಲಿ ಬೆಂಕಿ ಕಾಣಿಸಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಿಸಿದರಾದರೂ, ಆ ವೇಳೆಗಾಗಲೇ ಅಪಾರ ಜೀವರಾಶಿಗಳು ಹಾಗೂ ಅಪರೂಪದ ಸಸ್ಯರಾಶಿ ಬೆಂಕಿಗಾಹುತಿಯಾಗಿದೆ.

ರಾತ್ರಿ ವೇಳೆ ಬೆಟ್ಟದ ವ್ಯಾಪ್ತಿಯಲ್ಲಿ ಕುಡಿಯುವುದು, ಧೂಮಪಾನ ಮಾಡುವುದು ಸಾಮಾನ್ಯವಾಗಿದೆ. ಸೀಗರೇಟು ಸೇದಿ ಬೆಟ್ಟದ ಭಾಗದಲ್ಲಿ ಬೀಸಾಡಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದ್ದು, ಕಿಡಿಗೇಡಿಗಳಿಗಾಗಿ ಹುಡಕಾಟ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.