ಚಿಕ್ಕಬಳ್ಳಾಪುರ: ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಹೆದರಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ 1 ನೇ ವಾರ್ಡಿನಲ್ಲಿ ನಡೆದಿದೆ. ನಗರದ 1ನೇ ವಾರ್ಡ್ನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಬೇಬಿ(15) ಆತ್ಮಹತ್ಯೆ ಮಾಡಿಕೊಂಡ ಬಾಲಕಿ ಎಂದು ತಿಳಿದು ಬಂದಿದೆ. ನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿದ್ದ ಬೇಬಿ ಕಳೆದ ದಿನವು ಪರೀಕ್ಷೆಗೆ ಹಾಜರಾಗಿರಲಿಲ್ಲ.
ಇಂದು ಸಹಾ ಪರೀಕ್ಷೆಗೆ ಹಾಜರಾಗುವಂತೆ ಶಿಕ್ಷಕರ ಮನವಿ ಮಾಡಿದ್ದು, ಬೇಬಿ ಸಹಪಾಠಿಗಳನ್ನು ಈ ಸಂಬಂಧ ವಿದ್ಯಾರ್ಥಿನಿಯ ಮನೆಗೆ ಕಳುಹಿಸಿದ್ರು. ಆದರೆ, ಶಾಲೆ ಹಾಗೂ ಪರೀಕ್ಷೆಗೆ ಹೋಗಲು ಇಷ್ಟವಿಲ್ಲವೆಂದು ಹೇಳಿದ್ದ ಬೇಬಿ ತಾಯಿಯ ಜೊತೆ ಹಠ ಮಾಡಿದ್ದಳು. ನಂತರ ಮನೆಯಲ್ಲಿ ನೇಣಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.