ಚಿಕ್ಕಬಳ್ಳಾಪುರ: ನಕಲಿ ಸಿಇಒ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಚಳಿ ಬಿಡಿಸಿದ ಘಟನೆ ಜಿಲ್ಲೆಯ ನೂತನ ತಾಲೂಕು ಚೇಳೂರಿನಲ್ಲಿ ನಡೆದಿದೆ.
ಕಾರು ಚಾಲಕನ ಜೊತೆ ಬಂದ ನಾಗೇಶ್ ಎಂಬ ನಕಲಿ ಸಿಇಒ ಡಾಕ್ಟರ್ಗಳ ಬಳಿ ಹಣ ಪೀಕಲು ಯತ್ನಿಸಿದ್ದು, ಡಾಕ್ಟರ್ಗಳಿಗೆ ಆವಾಜ್ ಹಾಕಿ ಚಳಿ ಬಿಡಿಸಿದ್ದಾನೆ. ಸದ್ಯ ಜಿಲ್ಲೆಯ ಚೇಳೂರು ಹಾಗೂ ಚಾಕುವೇಲು ಆಸ್ಪತ್ರೆಗೆ ಭೇಟಿ ನೀಡಿ ಎರಡೂ ಕಡೆ ಆಸ್ಪತ್ರೆ ಸಿಬ್ಬಂದಿಗೆ ಆವಾಜ್ ಹಾಕಿ ಚಳಿ ಬಿಡಿಸಿದ್ದಾನೆ ಎನ್ನಲಾಗಿದೆ.
ಕಳೆದ ವರ್ಷ ಕೂಡಾ ಬಾಗೇಪಲ್ಲಿಗೆ ಹ್ಯೂಮನ್ ರೈಟ್ಸ್ ಅಧಿಕಾರಿಯಾಗಿ ಹೋಗಿದ್ದು, ಅಲ್ಲಿಯೂ ತನ್ನ ನಟನೆ ತೋರಿ ಎಸ್ಕೇಪ್ ಆಗಿದ್ದ ಭೂಪ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದ್ದ. ಸ್ಕಾರ್ಪಿಯೋ ವಾಹನದಲ್ಲಿ ಬಂದ ಕಳ್ಳ ಸಿಇಒ, ಅಧಿಕಾರಿಗಳ ಆಸನ ಅಲಂಕರಿಸಿ ಸಿಬ್ಬಂದಿಯನ್ನು ಕರೆದು ತರಾಟೆಗೆ ತಗೆದುಕೊಂಡಿದ್ದಾನೆ. ಮೊದಲು ಚೇಳೂರು ಆಸ್ಪತ್ರೆಗೆ ಭೇಟಿ ನೀಡಿ ನಂತರ ಚಾಕುವೇಲು ಆಸ್ಪತ್ರೆಯಲ್ಲಿ ತನ್ನ ನಟನೆ ಮಾಡಿದ್ದಾನೆ.
ಡಾಕ್ಟರ್ಗಳ ಮೇಲೆ ಆ್ಯಕ್ಷನ್ ತಗೆದುಕೊಂಡು ವಜಾ ಮಾಡುವುದಾಗಿ ಎಚ್ಚರಿಕೆ ನೀಡಿ ಅಧಿಕಾರಿಗಳ ಪುಸ್ತಕದಲ್ಲಿ ಮೇಲಿನ ಅಧಿಕಾರಿಗಳಿಗೆ ಪತ್ರ ಬರೆದು ತನ್ನ ಸಹಿ ಹಾಕಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನಂತೆ. ಇನ್ನು ಸ್ಕಾರ್ಪಿಯೋ ವಾಹನಕ್ಕೆ ಸಿಇಒ ಅಧಿಕಾರಿಯ ನಂಬರ್ ಸೇರಿದಂತೆ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಎಂಬ ಸೂಚನಾ ಫಲಕದೊಂದಿದೆ ಬಂದಿದ್ದು, ಆಸ್ಪತ್ರೆ ಸಿಬ್ಬಂದಿಗೆ ದೊಡ್ಡ ಶಾಕ್ ಆಗಿದೆ.
ಈ ದೃಶ್ಯಗಳನ್ನು ಸ್ಥಳೀಯರು ಈಟಿವಿ ಭಾರತ್ಗೆ ನೀಡಿದ್ದಾರೆ. ಸದ್ಯ ಜಿಲ್ಲೆಯ ಡಿಹೆಚ್ಒ ಮಾಹಿತಿ ತಿಳಿದು ಪೊಲೀಸರಿಗೆ ದೂರು ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ಈಟಿವಿ ಭಾರತ್ಗೆ ತಿಳಿಸಿದ್ದಾರೆ. ಈ ಘಟನೆ ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.