ಚಿಕ್ಕಬಳ್ಳಾಪುರ : ಸ್ಫೋಟಕಕ್ಕೆ ಬಳಸುವ ಏಳು ರೀತಿಯ ವಸ್ತುಗಳನ್ನು ಜಿಲ್ಲೆಯ ಆದೇಗಾರಹಳ್ಳಿ ಬಳಿ ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ಮಣಿಕಂಠಣ್ ಹಾಗೂ ಗುಡಿ ಬಂಡೆ ಮೂಲದ ಗಂಗೋಜಿ ರಾವ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಆರೋಪಿ ಮಣಿಕಂಠಣ್‌ಗೆ ಸೇರಿದ ಗ್ರಾಮದ ತೋಟದ ಮನೆಯಲ್ಲಿ ಸ್ಫೋಟಕಗಳು ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಏಳು ರೀತಿಯ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ಮಣಿಕಂಠನ್ ಹಾಗೂ ತೋಟದ ಮನೆಗೆ ವಸ್ತುಗಳನ್ನು ರವಾನಿಸುತ್ತಿದ್ದ ಗಂಗೋಜಿರಾವ್‌ನನ್ನು ಬಂಧಿಸಲಾಗಿದೆ.
ಓದಿ : ಪಡಿತರ ಅಕ್ಕಿ ಅಕ್ರಮ ಸಾಗಾಟ: ಓರ್ವನ ಬಂಧನ
ಆರೋಪಿಗಳ ವಿರುದ್ದ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.