ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲೂಕಿನ ಐವಾರಪಲ್ಲಿ ಗ್ರಾಮಕ್ಕೆ ನೀರು ಬರುತ್ತಿಲ್ ಎಂದು ಗೂಳೂರು ಗ್ರಾಮ ಪಂಚಾಯತಿ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ನಿತ್ಯ ಒಂದು ಮನೆಗೆ 25 ಬಿಂದಿಗೆಯಾದರೂ ನೀರು ಬೇಕು, 6 ತಿಂಗಳಿಂದ ಒಂದು ಹನಿ ನೀರು ಬಂದಿಲ್ಲ. ಈ ಬಗ್ಗೆ ಜನಪ್ರತಿನಿಧಿನಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನಿತ್ಯ ಹಣಕೊಟ್ಟು ಖಾಸಗಿ ಟ್ಯಾಂಕರ್ ನೀರು ಬಿಡಿಸಿಕೊಂಡು ಸಾವಿರಾರು ರೂಪಾಯಿಗಳನ್ನು ಅವರಿಗೆ ಕೊಡುತ್ತಿದ್ದೇವೆ. ಎಂಟು ತಿಂಗಳ ಹಿಂದೆಯೇ ಬೋರ್ವೆಲ್ ಕೊರೆದಿದ್ದರೂ, ಅದಕ್ಕೆ ಪಂಪ್ಸೆಟ್ ಹಾಕಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿಡಿಒ ವೆಂಕಟರಮಣಪ್ಪ, ಒಂದು ದಿನ ಕಾಲಾವಕಾಶ ಕೊಡಿ ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.