ಚಿಕ್ಕಬಳ್ಳಾಪುರ :ಇಲ್ಲಿನ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾದ ಹಾಲಿ ಸಂಸದ ವೀರಪ್ಪ ಮೊಯ್ಲಿ ಆಸ್ತಿ ವಿವರ ಎಷ್ಟು ಎಂಬ ಚರ್ಚೆ ಲೋಕಸಭಾ ವ್ಯಾಪ್ತಿಯಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ಅದರ ವಿವರ ಇಂತಿದೆ.
ಸಂಸದ ವಿರಪ್ಪ ಮೊಯ್ಲಿ ಒಟ್ಟು 60,42,44,799 ಕೋಟಿ ಆಸ್ತಿ ಒಡೆಯನಾಗಿದ್ದಾರೆ. ತಮ್ಮ ಬಳಿ 1,40,579 ರೂಪಾಯಿ ನಗದು ಹಾಗೂ ಪತ್ನಿ ಬಳಿ1,03,336 ಲಕ್ಷ ರೂಪಾಯಿ ನಗದು ಇರೋದಾಗಿ ತಿಳಿಸಿದ್ದಾರೆ.
ಅದೇ ರೀತಿ ವಿವಿಧ ಬ್ಯಾಂಕ್ ಗಳಲ್ಲಿ ಠೇವಣಿಗಳು, ಶೇರುಗಳ ಒಟ್ಟು ಮೌಲ್ಯ 2,27,54,966 ಕೋಟಿ ರೂಪಾಯಿಗಳು ಹಾಗೂ ಪತ್ನಿಯ ಹೆಸರಲ್ಲಿ 5,55,32,918 ಕೋಟಿ ರೂಪಾಯಿ ಇದೆ. ಇನ್ನು26 ಎಕರೆ 27 ಗುಂಟೆಯ ಜಮೀನು ಹೊಂದಿದ್ದು, ಸದ್ಯದ ಮೌಲ್ಯ 26 ಕೋಟಿ 36 ಲಕ್ಷ ವಾಗಿದೆ. ವಿವಿದೆಡೆ ಇರುವ ನಿವೇಶಗಳ ಒಟ್ಟು ಮೌಲ್ಯ 10 ಕೋಟಿ 55 ಲಕ್ಷ 85 ಸಾವಿರ ರೂಪಾಯಿಗಳು.
ವೀರಪ್ಪ ಮೊಯ್ಲಿಯವರ ಪತ್ನಿ ಒಟ್ಟು 14 ಕೋಟಿ 82 ಲಕ್ಷ 15 ಸಾವಿರ ರೂಪಾಯಿಯ ಸ್ಥಿರಾಸ್ತಿ ಹೊಂದಿದ್ದು 14,30,000 ಲಕ್ಷ ಮೌಲ್ಯದ ಬಂಗಾರ ಹೊಂದಿದ್ದಾರೆ.ಅದೇ ರೀತಿ ವೀರಪ್ಪ ಮೊಯ್ಲಿ 1,93,718 ಬೆಲೆಯ ಟಯೋಟ ಕಾರು ಪತ್ನಿಯ ಹೆಸರಿನಲ್ಲಿ 3,25,600 ಬೆಲೆಯ ಹೊಂಡಾ ಎಕಾರ್ಡ್ ಕಾರು. 6,60,540 ಲಕ್ಷ ಬೆಲೆಯ ಎರಡು ಕಾರುಗಳನ್ನು ಹೊಂದಿದ್ದಾರೆ. ಅಲ್ಲದೆ ಒಟ್ಟು 10 ಕೋಟಿ 43 ಲಕ್ಷ 16 ಸಾವಿರದ 683 ರೂಪಾಯಿಗಳ ಸಾಲ ಹೊಂದಿರೋದಾಗಿ ಘೋಷಣೆ ಮಾಡಿಕೊಂಡಿದ್ದಾರೆ.