ETV Bharat / state

ನರೇಗಾ ಕಾಮಗಾರಿಯಲ್ಲಿ ಭ್ರಷ್ಟಾಚಾರ : ಬಾಗೇಪಲ್ಲಿ ತಾಪಂ ಸದಸ್ಯರ ಆರೋಪ - ಬಾಗೇಪಲ್ಲಿ

ಬಾಗೇಪಲ್ಲಿಯಲ್ಲಿ ಮುಗ್ಧ ಜನತೆಯಿಂದ ಕೆಲಸದ ಕಾರ್ಡ್​ಗಳನ್ನು ಪಡೆದು, ಅವರಿಗೆ 100-200 ರೂ. ಕೊಟ್ಟು ಕೆಲಸಕ್ಕೆ ಬಾರದಿದ್ದರೂ ಕಾರ್ಡ್ ದುರ್ಬಳಕೆ ಮಾಡಲಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಶೀಘ್ರವಾಗಿ ಬಿಲ್ ಮಾಡುವಂತೆ ಅಧಿಕಾರಿಗಳೇ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಸಭೆ
ಸಭೆ
author img

By

Published : Jul 9, 2020, 11:06 PM IST

ಬಾಗೇಪಲ್ಲಿ: ನರೇಗಾ ಕಾಮಗಾರಿ ಕೆಲಸದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ಒಂದೇ ಕುಟುಂಬದ ಹಲವರು ಕೆಲಸದ ಕಾರ್ಡ್‌ಗಳನ್ನು ಮಾಡಿಸಿದ್ದಾರೆ. ಕೆಲಸ ಮಾಡದೇ ಬಿಲ್ ಮಾಡುತ್ತಿದ್ದರೂ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ನರೇಗಾ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ತಾಪಂ ಸದಸ್ಯ ರಾಮಕೃಷ್ಣಾರೆಡ್ಡಿ ಆರೋಪಿಸಿದ್ದಾರೆ.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಆರ್. ನರೇಂದ್ರಬಾಬು ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಸದಸ್ಯ ರಾಮಕೃಷ್ಣಾರೆಡ್ಡಿ, ಯಂತ್ರಗಳ ಬಳಕೆಯನ್ನು ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಬಳಸಬೇಕು. ಆದರೆ ನಮ್ಮ ತಾಲ್ಲೂಕಿನಲ್ಲಿ ಮುಗ್ಧ ಜನತೆಯಿಂದ ಕೆಲಸದ ಕಾರ್ಡ್​ಗಳನ್ನು ಪಡೆದು, ಅವರಿಗೆ 100-200 ರೂ. ಕೊಟ್ಟು ಕೆಲಸಕ್ಕೆ ಬಾರದಿದ್ದರೂ ಕಾರ್ಡ್ ದುರ್ಬಳಕೆ ಮಾಡಲಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಶೀಘ್ರವಾಗಿ ಬಿಲ್ ಮಾಡುವಂತೆ ಅಧಿಕಾರಿಗಳೇ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಉತ್ತರಿಸಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನರೇಂದ್ರ ಬಾಬು, ನರೇಗಾ ಕಾಮಗಾರಿ ವೀಕ್ಷಣೆಗೆ, ಜಾಗೃತಿಗೆ ಒಂದು ಸಮಿತಿ ರಚಿಸಿ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದರು.

ತಾಲ್ಲೂಕಿನಲ್ಲಿ ಇದುವರೆಗೆ ಕೋವಿಡ್-19 ಸೋಂಕು ಹರಡದಿರುವುದು ಸಂತಸದ ವಿಷಯ. ತಾಲ್ಲೂಕು ಆರೋಗ್ಯಾಧಿಕಾರಿ ಸಿ.ಎನ್. ಸತ್ಯನಾರಾಯಣರೆಡ್ಡಿ, ಆರೋಗ್ಯ, ಆಶಾ, ಅಂಗನವಾಡಿ ನೌಕರರು, ಪೊಲೀಸರು ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದಾರೆ. ಎಪಿಎಂಸಿಯಲ್ಲಿ ವ್ಯಾಪಾರಿಗೆ ಪಾಸಿಟಿವ್ ಪ್ರಕರಣ ಹೊರತುಪಡಿಸಿ 25 ಗ್ರಾಮ ಪಂಚಾಯಿತಿಗಳಲ್ಲಿ ಸೋಂಕು ಹರಡಿಲ್ಲ. ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿರುವ ಅಧಿಕಾರಿ ಹಾಗೂ ನೌಕರರಿಗೆ, ಪಕ್ಷಾತೀತವಾಗಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಆರೋಗ್ಯ ಸಿಬ್ಬಂದಿಯನ್ನು ಅಭಿನಂದಿಸಿದರು.

ಸದಸ್ಯ ಶ್ರೀರಾಮನಾಯಕ್ ಮಾತನಾಡಿ, ಯಲ್ಲಂಪಲ್ಲಿ ವ್ಯಾಪ್ತಿಯ ಕಾಗಾನಪಲ್ಲಿ, ಮರವಪಲ್ಲಿ, ಸಿದ್ದನಪಲ್ಲಿ ತಾಂಡಗಳಿಗೆ ರಸ್ತೆ ಮಾಡಿಸಿ ಎಂದು ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದರು. ಹಿಂದಿನ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ತಾಂಡಗಳಿಗೆ ಭೇಟಿ ನೀಡಿ ರಸ್ತೆ ಕಾಮಗಾರಿಗೆ ಅನುಮೋದನೆ ಮಾಡಿಸಿದ್ದರು. ನಂತರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇದುವರೆಗೂ ರಸ್ತೆ ಆಗಿಲ್ಲ. ಗ್ರಾಮಕ್ಕೆ ರಸ್ತೆ ಮಾಡಿಸಿಲ್ಲ ಎಂದು ನಮ್ಮನ್ನು ಗ್ರಾಮಸ್ಥರು ಕೇಳುತ್ತಾರೆ. ಅಧಿಕಾರಿಗಳಿಗೆ ಎಷ್ಟೇ ಬಾರಿ ತಿಳಿಸಿದರೂ, ರಸ್ತೆ ಕಾಮಗಾರಿ ಮಾಡಿಲ್ಲ ಎಂದು ದೂರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.