ಚಿಕ್ಕಬಳ್ಳಾಪುರ: ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರ ತವರು ಜಿಲ್ಲೆಯಲ್ಲಿ ಮೂವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಮೂವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ತಾಯಿ ಹಾಗೂ ಸಹೋದರನ ಜೊತೆ ಮೆಕ್ಕಾಗೆ ತೆರಳಿದ್ದ ಮಹಿಳೆಗೆ ಸೋಂಕು ತಗುಲಿದೆ.
![Coronavirus is the strongest of the three chikkaballapur](https://etvbharatimages.akamaized.net/etvbharat/prod-images/kn-ckb-05-corona-positive-av-kac10004_24032020154654_2403f_1585045014_959.jpg)
ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾರ್ಚ್ 14ರಂದು ಮೆಕ್ಕಾದಿಂದ ಹೈದರಾಬಾದ್ಗೆ ಮಹಿಳೆ ಆಗಮಿಸಿದ್ದರು. ಮಾ. 16ರಂದು ಮಹಿಳೆ ಗೌರಿಬಿದನೂರಿಗೆ ಬಂದಿದ್ದರು ಎನ್ನಲಾಗಿದೆ.