ETV Bharat / state

ಚಿಕ್ಕಬಳ್ಳಾಪುರ ನಗರ ಸಭೆ ಆಯುಕ್ತರಿಗೆ ಕೊರೊನಾ..! - ಕೊರೊನಾ ಸೋಂಕಿತರು ಪತ್ತೆ

ಚಿಕ್ಕಬಳ್ಳಾಪುರ ನಗರ ಸಭೆ ಆಯುಕ್ತರು ಇಂದು ಜಿಲ್ಲೆಯಲ್ಲಿ 19 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಸೊಂಕಿತರ ಸಂಖ್ಯೆ 351 ಕ್ಕೆ ಏರಿಕೆಯಾಗಿದೆ.

Corona to Chikkaballapur Municipal Commissioner
ಚಿಕ್ಕಬಳ್ಳಾಪುರ ನಗರ ಸಭೆ ಆಯುಕ್ತರಿಗೆ ಕೊರೊನಾ
author img

By

Published : Jul 10, 2020, 11:22 PM IST

ಚಿಕ್ಕಬಳ್ಳಾಪುರ: ನಗರ ಸಭೆ ಆಯುಕ್ತರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 9 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಬಾಗೇಪಲ್ಲಿಯಲ್ಲಿ 2, ಚಿಂತಾಮಣಿ 2, ಶಿಡ್ಲಘಟ್ಟ 4 ಗೌರಿಬಿದನೂರು ಹಾಗೂ ಗುಡಿಬಂಡೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.

ಗುಡಿಬಂಡೆಯಲ್ಲಿ 52 ವರ್ಷದ ಪುರುಷ ಹಾಗೂ ಚಿಕ್ಕಬಳ್ಳಾಪುರದ 64 ವರ್ಷದ ಮಹಿಳೆಗೆ ಐಎಲ್ಐ ಮೂಲಕ ಸೋಂಕು ತಗುಲಿದೆ. ಚಿಕ್ಕಬಳ್ಳಾಪುರದ 50 ವರ್ಷದ ಮಹಿಳೆಗೆ ಪಿ-11995 ರ ಸಂಪರ್ಕದಿಂದ, 17 ವರ್ಷದ ಬಾಲಕಿಗೆ ಪಿ-30624 ಸಂಪರ್ಕದಿಂದ, 28 ವರ್ಷದ ಮಹಿಳೆಗೆ ಪಿ - 31133 ಸಂಪರ್ಕದಿಂದ, 22 ವರ್ಷದ ಯುವಕ 52 ವರ್ಷದ ಮಹಿಳೆಗೆ ಪಿ-30624 ಸಂಪರ್ಕದಿಂದ, 58 ವರ್ಷದ ಚಿಂತಾಮಣಿ ಮಹಿಳೆ, 49 ವರ್ಷದ ಗೌರಿಬಿದನೂರಿನ ಪುರುಷ ಹಾಗೂ 57 ವರ್ಷದ ಶಿಡ್ಲಘಟ್ಟದ ಪುರುಷನಿಗೆ ಬೆಂಗಳೂರಿನ ನಂಟಿನಿಂದ ಸೋಂಕು ಧೃಡಪಟ್ಟಿದೆ.

ಇನ್ನು ಚಿಂತಾಮಣಿಯ 21 ವರ್ಷದ ಯುವತಿಗೆ ಪಿ-31144 ಸಂಪರ್ಕದಿಂದ, ಚಿಕ್ಕಬಳ್ಳಾಪುರದ 21 ವರ್ಷದ ಯುವಕನಿಗೆ ಪಿ- 18107 ಸಂಪರ್ಕದಿಂದ, ಶಿಡ್ಲಘಟ್ಟದ 50 ವರ್ಷದ ಮಹಿಳೆಗೆ ಪಿ-14413 ಸಂಪರ್ಕದಿಂದ, 30 ವರ್ಷದ ಮಹಿಳೆಗೆ ಪಿ-14413 ಸಂಪರ್ಕ ಹಾಗೂ 50 ವರ್ಷದ ಬಾಗೇಪಲ್ಲಿ ಮೂಲದ ವ್ಯಕ್ತಿಗೆ ಪಿ-30602 ಸಂಪರ್ಕದಿಂದ ಕೊರೊನಾ ಧೃಡಪಟ್ಟಿದೆ.

ಇನ್ನೂ ಬಾಗೇಪಲ್ಲಿಯ 51 ವರ್ಷದ ಪುರುಷ, ಚಿಕ್ಕಬಳ್ಳಾಪುರದ 29 ವರ್ಷದ ಮಹಿಳೆ ಸೇರಿದಂತೆ ಶಿಡ್ಲಘಟ್ಟದ 35 ವರ್ಷದ ಮಹಿಳೆಯ ಸಂಪರ್ಕವನ್ನು ಪತ್ತೆಹಚ್ಚಲಾಗುತ್ತಿದ್ದು, ಸೋಂಕಿತರ ಏರಿಯಾಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಇನ್ನೂ ಜಿಲ್ಲೆಯಲ್ಲಿ‌ ಸೋಂಕಿತ ಮೃತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು, ಚಿಕ್ಕಬಳ್ಳಾಪುರದ ಮಂಚನಬೆಲೆ ಗ್ರಾಮದ 50 ವರ್ಷದ ಮಹಿಳೆ ಹಾಗೂ ಶಿಡ್ಲಘಟ್ಟ ತಾಲೂಕಿನ 50 ವರ್ಷದ ಪುರುಷ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಮೃತರ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ.

10 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು 120 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲೆಯ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.