ಚಿಕ್ಕಬಳ್ಳಾಪುರ: ಎಲ್ಲೂ ಹೋಗದೆ ಮನೆಯಲ್ಲೇ ಇದ್ದ ವೃದ್ಧನಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಎಲ್ಲರಿಗೂ ಮೂಡಿದೆ.
ಇದುವೆರಗೂ ಜಿಲ್ಲೆಯಲ್ಲಿ 12 ಕೊರೊನಾ ಸೋಂಕಿತ ಪ್ರಕರಣಗಳು ಗೌರಿಬಿದನೂರಿನಲ್ಲೇ ಪತ್ತೆಯಾಗಿದ್ದವು. ಆದರೆ ,ಮನೆಯಲ್ಲೇ ಇದ್ದ ನಗರದ 65 ವರ್ಷದ ವೃದ್ಧನಿಗೂ ಸೋಂಕು ತಗುಲಿದೆ.
ಸದ್ಯ ವೃದ್ಧನ ಪತ್ನಿ, ಮಕ್ಜಳು ಸೇರಿದಂತೆ ಮನೆ ಕೆಲಸದಾಕೆ ಮತ್ತು ಕಾರು ಚಾಲಕನನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಮೊದಲೇ ಅಸ್ತಮಾ, ಬಿಪಿ ಹಾಗೂ ಸಕ್ಕರೆ ಕಾಯಿಲೆಯಿಂದ ಈ ವೃದ್ಧ ಬಳಲುತ್ತಿದ್ದರು. ಉಸಿರಾಟದ ತೊಂದರೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ,ಪರೀಕ್ಷೆ ವೇಳೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
12 ಪ್ರಕರಣಗಳಿಂದ ಗೌರಿಬಿದನೂರು ರೆಡ್ ಝೋನ್ ಪಟ್ಟಿಗೆ ಸೇರಿದ್ದು ಸೀಲ್ ಡೌನ್ ಮಾಡಲಾಗಿದೆ. ಸದ್ಯ ಚಿಕ್ಕಬಳ್ಳಾಪುರ ನಗರದ 12 ವಾರ್ಡ್ಗಳನ್ನು ಸಹ ಈಗ ಸೀಲ್ ಡೌನ್ ಮಾಡಲಾಗಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕ ಮನೆ ಮಾಡಿದೆ.