ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿಧುರಾಶ್ವಥದಲ್ಲಿ ಮಹಾತ್ಮ ಗಾಂಧಿಯವರ 150ನೇ ಜಯಂತಿ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಪಾಲ್ಗೊಂಡಿದ್ರು. ಈ ವೇಳೆ ಕಾಂಗ್ರೆಸ್ ಕಾಂಗ್ರೆಸ್ ಗಾಂಧಿ ತತ್ವಗಳನ್ನು ಕೊಲೆ ಮಾಡಿದೆ ಎಂದು ಆರೋಪಿಸಿದ್ರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್ ಪಕ್ಷ ಒಡೆದ ಮನೆಯಂತಾಗಿದೆ. ಪಕ್ಷದಲ್ಲಿ ಹಲವು ಗುಂಪುಗಳ ನಾಯಕರುಗಳಿದ್ದಾರೆ. ಸಿದ್ದರಾಮಯ್ಯ ಕೂಡ ಒಂದು ಪಕ್ಷದ ನಾಯಕನಷ್ಟೇ. ರಾಜ್ಯದಲ್ಲಿ ಎಲ್ಲರೂ ಒಪ್ಪಿಕೊಳ್ಳುವ ನಾಯಕ ಕಾಂಗ್ರೆಸ್ ಪಕ್ಷದಲ್ಲಿ ಯಾರೂ ಇಲ್ಲ ಎಂದ್ರು. ಗೂಡ್ಸೆ ಗಾಂಧಿ ದೇಹವನ್ನು ಮಾತ್ರ ಕೊಂದಿದ್ದಾರೆ. ಆದ್ರೆ ಕಾಂಗ್ರೆಸ್ ಗಾಂಧಿ ತತ್ವಗಳನ್ನು ಕೊಲೆ ಮಾಡಿದೆ. ಅಲ್ಲದೇ ಗಾಂಧಿ ಟೋಪಿ ಹಾಕಿಕೊಂಡು ಬೇರೆಯವರಿಗೆ ಟೋಪಿ ಹಾಕುವ ಕೆಲಸ ಮಾಡಿದೆ ಎಂದು ಆರೋಪಿಸಿದ್ರು. ದೇಶಕ್ಕೆ ಗಾಂಧಿ ತತ್ವಗಳ ಅನಿವಾರ್ಯತೆ ಇದೆ. ಗಾಂಧಿ ತತ್ವದೆಡೆಗೆ ನಮ್ಮ ಬಿಜೆಪಿ ಪಕ್ಷದ ನಡೆ ಎಂದ್ರು.
ಇನ್ನು ಇದೇ ವೇಳೆ ಸಿ.ಟಿ.ರವಿ ಮತ್ತು ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡ ಅಶ್ವಥ ನಾರಾಯಣ ದೇವಾಲಯದಲ್ಲಿ ಪೂಜೆ ಮಾಡಿಸಿದರು. ಬ್ರಿಟಿಷರ ವಿರುದ್ಧ ಹೋರಾಡಿ 30ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಹುತಾತ್ಮರಿಗೆ ನಮನ ಸಲ್ಲಿಸಿದರು.