ETV Bharat / state

ಚಿಕ್ಕಬಳ್ಳಾಪುರ ಪಿಎಲ್​ಡಿ ಬ್ಯಾಂಕ್ ಚುನಾವಣೆ ವೇಳೆ ಮಾರಾಮಾರಿ - ಕಾಂಗ್ರೆಸ್ ಜೆಡಿಎಸ್ ಮುಖಂಡರ ನಡುವೆ ಘರ್ಷಣೆ

ಪಿಎಲ್​ಡಿ ಬ್ಯಾಂಕ್ ಚುನಾವಣೆ ವೇಳೆ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಹಾಗೂ ವೈದ್ಯಕೀಯ ಸಚಿವ ಡಾ. ಕೆ ಸುಧಾಕರ್ ತಂದೆ ಕೇಶವರೆಡ್ಡಿ ಹಾಗೂ ಕಾಂಗ್ರೆಸ್​ ಮುಖಂಡರ ನಡುವೆ ತಾಲೂಕು ಪಂಚಾಯತ್​ ಆವರಣದಲ್ಲಿ ಮಾರಾಮಾರಿ ನಡೆದಿದೆ.

pld bank election
ಕಾಂಗ್ರೆಸ್ ಜೆಡಿಎಸ್ ಮುಖಂಡರ ನಡುವೆ ಘರ್ಷಣೆ
author img

By

Published : Feb 23, 2020, 11:17 PM IST

Updated : Feb 23, 2020, 11:31 PM IST

ಚಿಕ್ಕಬಳ್ಳಾಪುರ: ಪಿಎಲ್​ಡಿ ಬ್ಯಾಂಕ್ ಚುನಾವಣೆ ವೇಳೆ ತಾಲೂಕು ಪಂಚಾಯತ್​ ಆವರಣದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರ ತಂದೆ ಕೇಶವರೆಡ್ಡಿ ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಮಾರಾಮಾರಿ ನಡೆದಿದೆ.

ಪಿಎಲ್​ಡಿ ಬ್ಯಾಂಕ್ ಚುನಾವಣೆ ವೇಳೆ ಕಾಂಗ್ರೆಸ್ ಜೆಡಿಎಸ್ ಮುಖಂಡರ ನಡುವೆ ಘರ್ಷಣೆ

ಚಿಕ್ಕಬಳ್ಳಾಪುರ ಕ್ಷೇತ್ರದ ಸುಧಾಕರ್ ತಂದೆ ಕೇಶವರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ಮತಕೇಂದ್ರದತ್ತ ಆಗಮಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡ ವಕೀಲ ನಾರಾಯಣಸ್ವಾಮಿ ಮತದಾರರಲ್ಲದ ಶಾಸಕರ ತಂದೆ ಕೇಶವರೆಡ್ಡಿ ಅವರ ತಮ್ಮಂದಿರು ಚನ್ನಕೃಷ್ಣ ಹಾಗೂ ರವೀಂದ್ರರೆಡ್ಡಿ ಅವರನ್ನು ಒಳಗೆ ಬಿಟ್ಟರೆ ಸರಿ ಇರುವುದಿಲ್ಲ ಎಂದು ಗಲಾಟೆ ನಡೆಸಿದರು. ಇದರಿಂದ ಕೇಶವರೆಡ್ಡಿ ಹಾಗೂ ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿ ನಡುವೆ ಮಾತಿನ ಚಕಮಕಿ ನಡೆದು ಅವಾಚ್ಯ ಪದಗಳಿಂದ ನಿಂದಿಸಿಕೊಂಡಿದ್ದಾರೆ.

ಈ ಮದ್ಯೆ ಕೇಶವರೆಡ್ಡಿ ಅವರ ಖಾಸಗಿ ಸಿಬ್ಬಂದಿ ಚೇತನ್, ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿ ಮೇಲೆ ಮುಗಿಬಿದ್ದು ಹಲ್ಲೆಗೆ ಮುಂದಾಗಿದ್ದರು ಎನ್ನಲಾಗ್ತಿದೆ. ಅಲ್ಲದೆ, ಪರಸ್ಪರ ಇಬ್ಬರ ಗುಂಪುಗಳು ತಳ್ಳಾಟ ನಡೆಸಿದ್ದಾರೆ. ಕೂಡಲೇ ಗ್ರಾಮಾಂತರ ಠಾಣೆಯ ಪಿಎಸ್ಐ ಚೇತನ್ ಹಾಗೂ ಡಿವೈಎಸ್ಪಿ ರವಿಶಂಕರ್ ಗಲಾಟೆ ನಿಲ್ಲಿಸಲು ಪ್ರಯತ್ನಿಸಿದರು.

ಈ ಮಧ್ಯೆ ಡಿವೈಎಸ್ಪಿ ರವಿಶಂಕರ್ ಅವರಿಗೂ ಸಣ್ಣ ಗಾಯವಾಗಿದೆ. ಘಟನೆ ನಡೆದ ನಂತರ ಸ್ಥಳಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದರು.

Last Updated : Feb 23, 2020, 11:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.