ಚಿಕ್ಕಬಳ್ಳಾಪುರ: ಕ್ಷೇತ್ರದ ಮಾಜಿ ಶಾಸಕರ ವಿರುದ್ಧ ಸಬ್ಇನ್ಸ್ಪೆಕ್ಟರ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಹೊನ್ನೇಗೌಡ ಅವರು ಮಾಜಿ ಶಾಸಕರಾದ ಶಿವಾನಂದ್, ಅನುಸೂಯಮ್ಮ, ಮುನಿಯಪ್ಪ ವಿರುದ್ಧ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಬಾಬು ಜಗಜೀವನರಾಂ ಭವನ ಶಂಕುಸ್ಥಾಪನೆಗೆ ಅಡ್ಡಿ ಮಾಡಿದ ಆರೋಪದಡಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಸೌಂಡ್ ಬಾಕ್ಸ್ನಲ್ಲಿ 12 ಕೋಟಿ ಮೌಲ್ಯದ ಹೆರಾಯಿನ್ ಸಾಗಾಟ: ಗಂಡ-ಹೆಂಡ್ತಿ ಸೆರೆ
ಕಳೆದ ದಿನದ ಹಿಂದೆಯಷ್ಟೇ ಸಚಿವ ಸುಧಾಕರ್ ಹಾಗೂ ಎಂಟಿಬಿ ನಾಗರಾಜ್ ಎಂಜಿ ರಸ್ತೆಯ ಜೈ ಭೀಮ ಹಾಸ್ಟೆಲ್ ಬಳಿ ಜಗಜೀವನರಾಂ ಭವನ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಿದ್ದರು. ಈ ವೇಳೆ ಅಲ್ಲಿನ ದಲಿತ ಮುಖಂಡರು ಹಾಗೂ ಮಾಜಿ ಶಾಸಕರನ್ನು ಆಹ್ವಾನ ಮಾಡದಿದ್ದಕ್ಕೆ ಪ್ರತಿಭಟನೆ ನಡೆಸಲಾಗಿದೆ. ಅನುಮತಿ ಪಡೆದು ಪ್ರತಿಭಟನೆಗೆ ಮುಂದಾಗಿದ್ದ ಪ್ರತಿಭಟನೆಕಾರರ ಮೇಲೆ ಈಗ ದೂರು ದಾಖಲಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.