ETV Bharat / state

ಚಿಕ್ಕಬಳ್ಳಾಪುರ: ಕಾಲೇಜು ವಿದ್ಯಾರ್ಥಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಕೊಲೆ ಶಂಕೆ

ವಿದ್ಯಾರ್ಥಿಯ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದ್ದು, ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ.

College student found hanging
ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಸಾವು
author img

By

Published : Dec 17, 2022, 2:26 PM IST

Updated : Dec 17, 2022, 2:33 PM IST

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಪಟ್ಟಣದ ಕಾಲೇಜು ವಿದ್ಯಾರ್ಥಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾರ್ವಜನಿಕರು ಇದನ್ನು ಕೊಲೆ ಎಂದು ಶಂಕಿಸುತ್ತಿದ್ದಾರೆ.

ಬಾಗೇಪಲ್ಲಿ ತಾಲೂಕಿನ ಸಿಂಗಪ್ಪಗಾರಿಪಲ್ಲಿ ಗ್ರಾಮದ ಸುರೇಶ್(19) ಎಂಬಾತ ಪಟ್ಟಣದ ನ್ಯಾಷನಲ್ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿನಿಲಯದಲ್ಲಿ ವಾಸಿಸುತ್ತಿದ್ದರು. ಈ ವಿದ್ಯಾರ್ಥಿಯು ಇಂದು ಪಟ್ಟಣಕ್ಕೆ ಸಮೀಪ ಕೂಡಿಕೊಂಡ ರಸ್ತೆಯಲ್ಲಿರುವ ಖಬರಸ್ತಾನ್ ಹಿಂಭಾಗದ ಮರವೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಆದರೆ ನೆಲದ ಮೇಲೆ ಕಾಲುಗಳನ್ನಿಟ್ಟುಕೊಂಡಿರುವ ವಿದ್ಯಾರ್ಥಿಯ ಮೊಣಕಾಲಿನ ಮೇಲೆ ಸುಟ್ಟ ಗಾಯಗಳು, ಹರಿತವಾದ ಆಯುಧದಲ್ಲಿ ಮಾಡಿರುವ ಗಾಯಗಳು ಮತ್ತು ನೇಣು ಹಾಕಿಕೊಂಡಿದ್ದರೂ, ನೆಲದ ಮೇಲೆಯೇ ಕಾಲುಗಳನ್ನು ಇಟ್ಟುಕೊಂಡಿರುವುದು ಅನುಮಾನಗಳಿಎಗ ಕಾರಣವಾಗಿದೆ.

ಅಲ್ಲೇ ಸಮೀಪದ ಹೊಲದಲ್ಲಿ ಕೆಲಸ ಮಾಡುತ್ತಿದ್ದವರು ಹೇಳುವ ಪ್ರಕಾರ, ಇಂದು ಬೆಳಗ್ಗೆ ಮೂವರು ವಿದ್ಯಾರ್ಥಿಗಳು ದ್ವಿಚಕ್ರವಾಹನದಲ್ಲಿ ಈ ಸ್ಥಳಕ್ಕೆ ಬಂದಿದ್ದರಂತೆ. ಈ ಮೊದಲು ಇಲ್ಲಿ ವಿದ್ಯಾರ್ಥಿಗಳು, ಪುಂಡ ಪೋಕರಿಗಳು ಮದ್ಯ ಸೇವಿಸಲು, ಬೆಟ್ಟಿಂಗ್ ಆಡಲು ಆಗಮಿಸುತ್ತಿದ್ದರು. ಹೀಗಾಗಿ ಅಷ್ಟಾಗಿ ಆ ವಿದ್ಯಾರ್ಥಿಗಳನ್ನು ಗಮನಿಸಿಲ್ಲ ಎಂದು ಹೇಳುತ್ತಿದ್ದಾರೆ.

ವಿದ್ಯಾರ್ಥಿಯ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದ್ದು, ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ.

ಇದನ್ನೂ ಓದಿ:ಕಾಲೇಜಿಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದ ನವ ವಿವಾಹಿತೆ ನದಿಯಲ್ಲಿ ಶವವಾಗಿ ಪತ್ತೆ

Last Updated : Dec 17, 2022, 2:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.