ಚಿಕ್ಕಬಳ್ಳಾಪುರ : ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಕಠಿಣ ನಿರ್ಧಾರಗಳನ್ನು ತಗೆದುಕೊಂಡಿದ್ದಾರೆ. ಸಿಎಂ ನೋಡಲು ನಿಧಾನ ಗತಿಯಾಗಿ ಹಾಗೂ ಡೀಸೆಂಟಾಗಿ ಇದ್ದಾರೆ. ಆದರೆ, ಅವರ ನಿರ್ಣಯಗಳು ತುಂಬಾ ಸ್ಟ್ರಾಂಗ್ ಆಗಿ ಇರಲಿವೆ ಎಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಕೆ.ಸುಧಾಕರ್ ಸಿಎಂ ಬೊಮ್ಮಾಯಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಪ್ರವೀಣ್ ಹತ್ಯೆ ಹಾಗೂ ಕಾರ್ಯಕರ್ತ ರಾಜೀನಾಮೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮಂಗಳೂರಿನಲ್ಲಿ ನಡೆಯುತ್ತಿರುವ ಹತ್ಯೆ ಪ್ರಕರಣಗಳು ಸಾಕಷ್ಟು ನೋವು ತಂದಿವೆ. ಅಂಶಾತಿ ಉಂಟು ಮಾಡಿದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಕ್ರಮ ಎಷ್ಟು ತ್ವರಿತವಾಗಿ ಆಗಲಿದೆ ಎಂದು ರಾಜ್ಯದ ಜನ ನೋಡುತ್ತಾರೆ. ಈಗಾಗಲೇ ಸಿಎಂ ಮಂಗಳೂರಿಗೆ ಹೋಗಿ ಸೂಚನೆಗಳನ್ನು ಕೊಟ್ಟಿದ್ದಾರೆ ಎಂದರು.
ಬೊಮ್ಮಾಯಿ ಅವರು ಗೃಹಮಂತ್ರಿಗಳಾಗಿದ್ದಾಗ 22 ಜನರನ್ನು ತಿಹಾರ್ ಜೈಲಿಗೆ ಕಳುಹಿಸಿದ್ದಾರೆ. ಇನ್ನೂ ಸಿಎಂ ಬಹಳ ಗಟ್ಟಿ ತೀರ್ಮಾನ ತೆಗೆದುಕೊಳ್ಳುವ ವ್ಯಕ್ತಿ. ನೋಡಲು ಸುಮ್ಮನೆ ಡಿಸೇಂಟ್ ಆಗಿ ಕಾಣಿಸಿದರೂ ಅವರ ನಿರ್ಣಯಗಳು ತುಂಬಾ ಸ್ಟ್ರಾಂಗ್. ಅವರು ಜೋರು ಮಾತನಾಡುವುದಿಲ್ಲ. ಕೆಲವು ವಿರೋಧ ಪಕ್ಷದ ನಾಯಕರು ಜೋರು ಮಾತನಾಡುತ್ತಾರೆ. ಆದರೆ ಏನು ಸಿಗಲ್ಲಾ ಎಂದು ವಿರೋಧ ಪಕ್ಷದ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದು, ಯಾವುದೇ ಕಾರ್ಯಕರ್ತರು ಕಾನೂನು ಕೈಗೆ ತೆಗೆದುಕೊಳ್ಳುವುದು ಬೇಡ. ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡರು. ಫಾಜಿಲ್ ಕೊಲೆಗೆ ಕಾರಣ ಏನು ಎಂಬುದು ತನಿಖೆ ನಂತರ ತಿಳಿಯಲಿದೆ. ಪ್ರವೀಣ್ ಹತ್ಯೆ ನಂತರ ಬಿಜೆಪಿಯ ಕೆಲವು ಕಾರ್ಯಕರ್ತರು ರಾಜೀನಾಮೆ ಕೊಟ್ಟಿದ್ದಾರೆ. ಆದರೆ, ಬಿಜೆಪಿ ಪಕ್ಷ ಕಾರ್ಯಕರ್ತರ ಪರವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಗೂಂಡಾಗಳನ್ನು ಮಟ್ಟ ಹಾಕಲು ಏನು ಬೇಕೋ ಅದನ್ನು ಮಾಡುತ್ತಿದ್ದೇವೆ: ಸಚಿವ ಆರ್ ಅಶೋಕ್