ETV Bharat / state

ಮೂವರು ಮನೆಗಳ್ಳರ ಬಂಧನ: 5.72 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಪೊಲೀಸ್​ ವಶಕ್ಕೆ

ಚಿಂತಾಮಣಿ ಠಾಣೆ ಪೊಲೀಸರು ಮೂವರು ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ, ಅವರಿಂದ ಒಟ್ಟು 5.72 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನ, 888 ಗ್ರಾಂ ಬೆಳ್ಳಿ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಮೂವರು ಮನೆಗಳ್ಳರ ಬಂಧನ
arrest
author img

By

Published : Nov 17, 2021, 11:42 AM IST

ಚಿಕ್ಕಬಳ್ಳಾಪುರ: ದ್ವಿಚಕ್ರ ಹಾಗೂ ಮನೆಗಳ್ಳತನ ಮಾಡುತ್ತಿದ್ದ ಮೂವರು ಖದೀಮರವನ್ನು ಚಿಂತಾಮಣಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಕಾಡುಗೋಡಿಯ ಎ.ನಾರಾಯಣ ಬಿನ್ ವೆಂಕಟಪ್ಪ, ಚಿಂತಾಮಣಿ ತಾಲೂಕಿನ ಮಿಂಡಿಗಲ್ ಗ್ರಾಮದ ಎಂ.ಕೆ.ಅಶೋಕ್ ಬಿನ್ ಕೇಶವರೆಡ್ಡಿ, ಬೆಂಗಳೂರಿನ ಕೊಡಿಗೇನಹಳ್ಳಿಯ ಶಿವರಾಜ್ ಬಿನ್ ರಾಮಚಂದ್ರಪ್ಪ ಬಂಧಿತ ಆರೋಪಿಗಳು.

ಇದನ್ನೂ ಓದಿ: ರಾಮನಗರದಲ್ಲಿ ಧಾರಾಕಾರ ಮಳೆ: ಕಣ್ವ ಜಲಾಶಯದಲ್ಲಿ ತೇಲಿಬಂದವು ಮೃತದೇಹಗಳು

ಬಂಧಿತರಿಂದ ಒಟ್ಟು 5.72 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನ, 888 ಗ್ರಾಂ ಬೆಳ್ಳಿ ಹಾಗೂ ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಪದೇ ಪದೇ ನಡೆಯುತ್ತಿವೆ ಎಂಬ ದೂರು ಕೇಳಿಬಂದ ಹಿನ್ನೆಲೆ ಡಿವೈಎಸ್​ಪಿ ಕುಶಲ್ ಚೌಕ್ಸೆ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ ಇನ್ಸ್​ಪೆಕ್ಟರ್ ಎ.ಎಸ್.ವಿಶ್ವಾಸ್ ನೇತೃತ್ವದಲ್ಲಿ ತಂಡ ರಚನೆ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ವಾಟ್ಸ್​​ಆ್ಯಪ್​​ ಸ್ಟೇಟಸ್​ನಲ್ಲಿ​ ಯುವತಿಯ ನಗ್ನ ಫೋಟೋ ಹರಿಯಬಿಟ್ಟ ಆಸಾಮಿ

ಇನ್ನು ಆರೋಪಿಗಳ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆ, ಬೆಂಗಳೂರಿನ ವರ್ತೂರು ಪೊಲೀಸ್ ಠಾಣೆ, ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.