ETV Bharat / state

ಚಿಂತಾಮಣಿ ಎಪಿಎಂಸಿ ಚುನಾವಣೆ.. ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ..

ಇಬ್ಬರು ಅಭ್ಯರ್ಥಿಗಳು ಮಾತ್ರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರಗಳನ್ನು ಸಲ್ಲಿಸಿದ್ದು, ಉಳಿದ ಯಾವುದೇ ನಾಮಪತ್ರಗಳು ಬಾರದ ಹಿನ್ನೆಲೆ ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀರಾಮರೆಡ್ಡಿ, ಹಾಗೂ ಮಂಜುನಾಥ್ ರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Chintamani APMC election: unanimous selection of president and vice president.
ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ
author img

By

Published : Jun 10, 2020, 4:36 PM IST

ಚಿಕ್ಕಬಳ್ಳಾಪುರ (ಚಿಂತಾಮಣಿ) : ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಕ್ಷೇತ್ರದ ಮಾಜಿ ಶಾಸಕ ಎಂ‌ ಸಿ ಸುಧಾಕರ್ ಬಣದ ಮುರುಗಮಲ‌ ಕ್ಷೇತ್ರದ ಶ್ರೀರಾಮರೆಡ್ಡಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಕೋಟಗಲ್ ಕ್ಷೇತ್ರ ಮಂಜುನಾಥ್ ರೆಡ್ಡಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ಎಪಿಎಂಪಿಸಿಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ..
ಒಟ್ಟು 13 ಚುನಾಯಿತ ಸದಸ್ಯರು ಹಾಗೂ ಟಿಎಪಿಸಿಎಂಎಸ್‌ನ 1 ನಿರ್ದೇಶಕರು ಸೇರಿ ಒಟ್ಟು 14 ಜನ ಸದಸ್ಯರಿದ್ದಾರೆ. ಇಲ್ಲಿ ಇಬ್ಬರು ಅಭ್ಯರ್ಥಿಗಳು ಮಾತ್ರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರಗಳನ್ನು ಸಲ್ಲಿಸಿದ್ದರು. ಉಳಿದ ಯಾವುದೇ ನಾಮಪತ್ರಗಳು ಬಾರದ ಹಿನ್ನೆಲೆ ಶ್ರೀರಾಮರೆಡ್ಡಿ ಹಾಗೂ ಮಂಜುನಾಥ್ ರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ತಹಶೀಲ್ದಾರ್ ಹನುಮಂತರಾಯಪ್ಪ ಹೂವಿನ‌ ಹಾರ ಹಾಕಿ ಶುಭ ಕೋರಿದರು. ನಂತರ ನೂತನ ಅಧ್ಯಕ್ಷರು ಮಾತನಾಡಿ, ಮಾರುಕಟ್ಟೆಯ ಅಭಿವೃದ್ದಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ ಮಾಜಿ ಶಾಸಕ ಎಂ ಸಿ ಸುಧಾಕರ್ ಗೆದ್ದ ಅಭ್ಯರ್ಥಿಗಳಿಗೆ ಸಿಹಿ ನೀಡಿ ಶುಭಕೋರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.