ಚಿಕ್ಕಬಳ್ಳಾಪುರ: ಜಿಲ್ಲೆಯ ಆರ್‌ಟಿಓ ಕಚೇರಿ ಅಧಿಕಾರಿಗಳು ಕಚೇರಿಯಲ್ಲಿನ ವಿಳಂಬ ನೀತಿಗೆ ಬ್ರೇಕ್ ಹಾಕಿದ್ದು, ಸಾಮಾನ್ಯ ಜನರಿಗೆ ತಮ್ಮ ಸಮಯಕ್ಕೆ ಸರಿಯಾಗಿ ವಾಹನ ನೋಂದಣಿ ನೀಡುವಲ್ಲಿ ಮುಂಚೂಣಿಯಲ್ಲಿದ್ದರು. ಆದರೆ ಆರ್‌ಟಿಓ ಕಚೇರಿಗೂ ಕೊರೊನಾ ಕರಿನೆರಿಳು ಬಿದ್ದಿದ್ದು, ಸ್ವಲ್ಪ ಮಟ್ಟಿಗೆ ತೊಂದರೆ ಅನುಭವಿಸುವಂತಾಗಿದೆ.
ಆರ್‌ಟಿಓ ಆಫೀಸ್ ಅಂತಾ ಹೋದ್ರೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿರುತ್ತೆ ಎಂಬುವುದು ಸದ್ಯದ ಪರಿಸ್ಥಿತಿ. ಆದರೆ ಈಗ ಎಲ್ಲಾ ಆನ್ಲೈನ್ನಲ್ಲಿ ಅರ್ಜಿಗಳ ಸ್ವೀಕೃತಿ ಇರುವುದರಿಂದ ಮಧ್ಯವರ್ತಿಗಳ ಕಾಟ ಕಡಿಮೆಯಾಗಿದೆ. ಆದರೂ ಇನ್ನೂ ಸಾಕಷ್ಟು ಅನಕ್ಷರಸ್ಥರು, ಗ್ರಾಮೀಣ ಭಾಗದ ಜನತೆ ಹೆಚ್ಚಿನದಾಗಿ ಮಧ್ಯವರ್ತಿಗಳನ್ನೇ ಅವಲಂಬಿಸಿದ್ದು, ಇದರಿಂದ ಜನರಿಗೆ ಹೆಚ್ಚು ಹಣ ಖರ್ಚಾಗುತ್ತಿದೆ ಹಾಗೂ ಮಧ್ಯವರ್ತಿಗಳ ಹಾವಳಿ ಮುಂದುವರಿಯಲು ಕಾರಣವಾಗಿದೆ ಅಂದ್ರು.
2020 ರ ಆಗಸ್ಟ್ ತಿಂಗಳಿನಲ್ಲಿ ವಾಹನ ತಪಾಸಣೆ, ಸಿಆರ್ ತೊಂದರೆ ಸೇರಿದಂತೆ ದಾಖಲಾತಿ ಇಲ್ಲದ ವಾಹನ ತಪಾಸಣೆ ನಡೆಸಿ ಸರಿಸುಮಾರು 35,99,597 ರೂಪಾಯಿಗಳ ಮೊತ್ತವನ್ನು ದಂಡರೂಪದಲ್ಲಿ ವಸೂಲಿ ಮಾಡಿ ಸರ್ಕಾರದ ಖಜಾನೆಗೆ ನೀಡಲಾಗಿದೆ ಎಂದು ತಿಳಿಸಿದರು.
ಆನ್‌ಲೈನ್ ಮೋಡ್‌ನಲ್ಲಿ ದಾಖಲಾತಿಗಳ ಪರಿಶೀಲನೆ ನಡೆಸುತ್ತಿರುವುದರಿಂದ ವಾಹನ ಮಾಲೀಕರಿಗೆ ಸಮಯದ ಅಭಾವ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿದಂತಾಗಿದೆ. ಇನ್ನೂ ಸಾಕಷ್ಟು ವಾಹನಗಳು ಆರ್‌ಟಿಓ ಅಧಿಕಾರಿಗಳ ಗಮನಕ್ಕೆ ಬರದೆ ವಾಹನಗಳನ್ನು ಚಲಾಯಿಸಿಕೊಳ್ಳುತ್ತಿದ್ದಾರೆ. ಇಂತಹ ವಾಹನಗಳನ್ನು ಹಿಡಿಯುವುದು ಆರ್‌ಟಿಓ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ ಎಂದ್ರು. ಇನ್ನೂ ಕೊರೊನಾ ಸಮಯದಲ್ಲಿ ಕೂಡ ಆರ್‌ಟಿಓ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿರುವುದು ಮೆಚ್ಚುಗೆಯ ವಿಷಯ ಎಂದು ಮಂಜುನಾಥ್ ಹೇಳಿದರು.