ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು 156 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಮೂವರು ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಚಿಕ್ಕಬಳ್ಳಾಪುರ 4, ಬಾಗೇಪಲ್ಲಿ 23, ಚಿಂತಾಮಣಿ 20, ಗೌರಿಬಿದನೂರು 55, ಗುಡಿಬಂಡೆ 14 ಹಾಗೂ ಶಿಡ್ಲಘಟ್ಟದಲ್ಲಿ 40 ಸೋಂಕು ದೃಢಪಟ್ಟಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 8,521ಕ್ಕೆ ಏರಿಕೆಯಾಗಿದೆ.
ಚಿಕ್ಕಬಳ್ಳಾಪುರ 101, ಬಾಗೇಪಲ್ಲಿ 36, ಚಿಂತಾಮಣಿ 57, ಗೌರಿಬಿದನೂರು 64, ಗುಡಿಬಂಡೆ 20 ಮತ್ತು ಶಿಡ್ಲಘಟ್ಟದ 20 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಗುಣಮುಖ ಆದವರ ಸಂಖ್ಯೆ 7,241ಕ್ಕೆ ಏರಿಕೆಯಾಗಿದೆ.
ಗೌರಿಬಿದನೂರು ಮೂಲದ 48 ವರ್ಷದ ಪುರುಷ, ಚಿಕ್ಕಬಳ್ಳಾಪುರ ಮೂಲದ 80 ವರ್ಷ ಹಾಗೂ 30 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.