ಚಿಕ್ಕಬಳ್ಳಾಪುರ: ರಾಜ್ಯದ ಉಪ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ನಾಮಪತ್ರ ಸಲ್ಲಿಕೆಯ ಕೊನೆ ದಿನವಾದ ನಿನ್ನೆ ಭರ್ಜರಿ ಹಾರಗಳ ರಾಜಕೀಯ ನಡೆಯಿತು.
ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳಿಂದ ಹಾರಗಳ ರಾಜಕೀಯ ಏರ್ಪಟ್ಟಿದೆ. ಮುಂಜಾನೆಯಿಂದಲೇ ಟೆಂಪಲ್ ರನ್ ಶುರು ಮಾಡಿದ ಅಭ್ಯರ್ಥಿಗಳು ತದನಂತರ ನಾಮಪತ್ರ ಸಲ್ಲಿಸಿದ್ದರು. ನಂತರದ ಮೆರವಣಿಗೆಯಲ್ಲಿ ಮೂರು ಪಕ್ಷಗಳ ಸ್ಟಾರ್ ನಾಯಕರು ಸಾಥ್ ನೀಡಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಸ್ಟಾರ್ ನಾಯಕರುಗಳಾದ ಕುಮಾರಸ್ವಾಮಿ ,ಡಿಕೆ ಶಿವಕುಮಾರ್ಗೆ ಬೃಹದಾಕಾರದ ಸೇಬಿನ ಹಾರವನ್ನು ಹಾಕಿದ್ದು, ಬಿಜೆಪಿ ಸ್ಟಾರ್ ನಾಯಕರಿಗೆ ಕಮಲದ ಹಾರವನ್ನು ಹಾಕಿ ಚಿಕ್ಕಬಳ್ಳಾಪುರ ಉಪಚುನಾವಣೆಗೆ ಹಾರಗಳ ರಾಜಕೀಯವನ್ನು ತಂದಿದ್ದಾರೆ.