ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಶಾಸಕರ ಸಹಿಯನ್ನು ನಕಲಿ ಮಾಡಿ ಮುಖ್ಯಮಂತ್ರಿಗಳಿಂದ ಬೇರೊಂದು ಸ್ಥಳಕ್ಕೆ ವರ್ಗಾವಣೆ ಮಾಡಿಸಿಕೊಂಡ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಚಂದ್ರಕಾಂತ್ ಅವರನ್ನು ಬೇರೊಂದು ಸ್ಥಳಕ್ಕೆ ವರ್ಗಾವಣೆ ಮಾಡುವಂತೆ, ಯಲಹಂಕ ಶಾಸಕರ ಹಾಗೂ ಸಿಎಂ ಸಹಿ ಹಾಕಿರುವ ಬಗ್ಗೆ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಪೊಲೀಸರಿಗೆ ದೂರು ನೀಡಿದ್ದಾರೆ.
![CM's signature copies allegation](https://etvbharatimages.akamaized.net/etvbharat/prod-images/4720761_ckb.jpg)
No-CMRK 379: 2019 ಇದೇ ತಿಂಗಳ 18:9 ರ ನನ್ನ ಲೆಟರ್‌ಹೆಡ್ ಪರಿಶೀಲಿಸಿದಾಗ ಶಿಫಾರಸು ಮಾಡಿದ ಪತ್ರದಲ್ಲಿ ಇರುವ ಸಹಿ ನನ್ನದಾಗಿಲ್ಲ. ಈ ಪತ್ರವನ್ನು ಮುಖ್ಯಮಂತ್ರಿಗಳಿಗೆ ನೀಡಿರುವುದು ಅಪರಾಧವಾಗಿದೆ. ಪತ್ರದಲ್ಲಿ ಮುಖ್ಯಮಂತ್ರಿಗಳ ಸಹಿಯೂ ನಕಲಾಗಿರುವುದಾಗಿ ತಿಳಿದು ಬರುತ್ತಿದೆ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.