ETV Bharat / state

ತುಂಬೆ-ಪಪ್ಪಾಯಿ ಎಲೆಗಳಿಂದ ಕೊರೊನಾ ವೈರಸ್‌ ತಡೆ ಸಾಧ್ಯ ಅಂತಾವ್ರೇ ಈ ಎಂಜಿನಿಯರ್‌.. - Chikkaballapur man who found herbal medicine

ಕೊರೊನಾದಂತಹ ಸೋಂಕನ್ನು ತುಂಬೆ-ಪಪ್ಪಾಯ ಗಿಡದ ಎಲೆಗಳಿಂದ ತಡೆ ಸಾಧ್ಯ. ದೇಹಕ್ಕೆ ಬೇಕಾಗುವ ರೋಗ ನಿರೋಧಕ ಶಕ್ತಿಯ ಜೊತೆಗೆ ಮಾರಕ ಖಾಯಿಲೆಗಳೂ ತಡೆಗಟ್ಟುತ್ತವೆಯಂತೆ. ಈಗಾಗಲೇ ಡೆಂಘೀ, ಮಲೇರಿಯಾ ವಾಸಿಯಾಗಿವೆ ಅಂತಾ ಇವರು ತಿಳಿಸಿದ್ದಾರೆ.

Chikkaballapur man who found herbal medicine for deadly diseases
ಮಾರಕ ರೋಗಗಳಿಗೆ ಗಿಡಮೂಲಿಕೆ ಔಷಧಿ ಕಂಡು ಹಿಡಿದ ಚಿಕ್ಕಬಳ್ಳಾಪುರದ ವ್ಯಕ್ತಿ
author img

By

Published : Mar 28, 2020, 8:57 PM IST

ಚಿಕ್ಕಬಳ್ಳಾಪುರ: ಕೊರೊನಾದಂತಹ ಮಾರಕ ಸೋಂಕಿಗೆ ಈವರೆಗೆ ಔಷಧಿ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ.ಆದರೆ, ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಇಂಜಿನಿಯರ್‌ವೊಬ್ಬ ಮನೆಯಲ್ಲೇ ವಿಷಮಶೀತ ಜ್ವರ, ಕೆಮ್ಮು ಸೇರಿ ಸಾಕಷ್ಟು ಖಾಯಿಲೆಗಳಿಗೆ ಗಿಡ ಮೂಲಿಕೆ ಮದ್ದು ಅರೆದಿದ್ದಾರಂತೆ.

ಮಾರಕ ರೋಗಗಳಿಗೆ ಗಿಡಮೂಲಿಕೆ ಔಷಧಿ ಕಂಡು ಹಿಡಿದ ಎಂಜಿನಿಯರ್‌..
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗಿಡಮೂಲಿಕೆ ಔಷಧಿ ತಯಾರಕ ಕಿಶೋರ್, ಸದ್ಯ ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ 5 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವಾಗಿದೆ. ಆದರೆ, ಈ ಗಿಡಮೂಲಿಕೆ ಔಷಧಿಯಿಂದ ಸೋಂಕು ಹರಡದಂತೆ ತಡೆಯಲು ಸಾಧ್ಯವಾಗುತ್ತದೆ. ತುಂಬೆ ಹಾಗೂ ಪಪ್ಪಾಯ ಗಿಡದ ಎಲೆಗಳಿಂದ ಕೊರೊನಾದಂತಹ ಸೋಂಕನ್ನು ತಡೆಗಟ್ಟಬಹುದು. ದೇಹಕ್ಕೆ ಬೇಕಾಗುವ ರೋಗ ನಿರೋಧಕ ಶಕ್ತಿಯ ಜೊತೆಗೆ ಮಾರಕ ಖಾಯಿಲೆಗಳನ್ನು ತುಂಬೆ ಹಾಗೂ ಪಪ್ಪಾಯಿ ಎಲೆಗಳಿಂದ ತಡೆಗಟ್ಟಬಹುದು.
ಈಗಾಗಲೇ ಈ ಎಲೆಗಳ ರಸದಿಂದ ಮಾರಕ ಖಾಯಿಲೆಗಳಾದ ಡೆಂಘೀ, ಮಲೇರಿಯಾ ಕಾಯಿಲೆಗಳೂ ವಾಸಿಯಾಗಿವೆ ಎಂದು ಅವರು ತಿಳಿಸಿದ್ದಾರೆ. ಸದ್ಯ ಚಿಂತಾಮಣಿ ತಾಲೂಕಿನಲ್ಲೂ ಹೋಂ ಕ್ವಾರಂಟೈನ್‌ ಇದ್ದು, ಅವರ ಮಾಹಿತಿ ಪಡೆದು ಗಿಡಮೂಲಿಕೆಗಳ ಅರಿವು ಮೂಡಿಸಲು ಶ್ರಮವಹಿಸುತ್ತಿದ್ದಾರೆ. ಜೊತೆಗೆ ಮುಖ್ಯಮಂತ್ರಿಗಳು, ವೈದ್ಯಕೀಯ ಶಿಕ್ಷಣ ಸಚಿವರು ಸೇರಿ ಜಿಲ್ಲಾಧಿಕಾರಿಗಳಿಗೂ ಇದರ ಕುರಿತು ಮೇಲ್ ಮೂಲಕ ಮಾಹಿತಿ ತಿಳಿಸಿಕೊಟ್ಟಿದ್ದಾರಂತೆ. ಕೊರೊನಾ ಪೀಡಿತರಿಗೆ ಇದರ ಮಾಹಿತಿ ತಿಳಿಸುವಂತೆಯೂ ಸಿವಿಲ್‌ ಎಂಜಿನಿಯರ್‌ ಕೂಡ ಆಗಿರುವ ಕಿಶೋರ್‌ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.