ಬೆಂಗಳೂರು: ರಾಜ್ಯದಲ್ಲಿ ಮತದಾನ ಮುಗಿದಿದ್ದು, ಯಲ್ಲರ ಗಮನ ಫಲಿತಾಂಶದಂತ ಕಡೆ ವಾಲಿದೆ. ಅದೇ ರೀತಿ ಸಾಕಷ್ಟು ಜಿದ್ದಾಜಿದ್ದಿ ಶುರು ಮಾಡಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮುಗಿದು ಎಣಿಕೆಗೆ ಹೆಚ್ಚು 10 ದಿನಗಳು ಮಾತ್ರ ಬಾಕಿ ಇವೆ. ಈ ಮಧ್ಯೆ ಅಭ್ಯರ್ಥಿಗಳ ಸೋಲು- ಗೆಲುವಿನ ಲೆಕ್ಕಾಚಾರದ ಕುರಿತು ಚರ್ಚೆಯಾಗುತ್ತಿದೆ.
ಹೌದು, ಬಚ್ಚೇಗೌಡ ಈ ಭಾಗದ ಪ್ರಬಲ ಸಮುದಾಯವರಾಗಿದ್ದು, ಕ್ಷೇತ್ರದಲ್ಲಿ ತಮ್ಮದೇ ವೋಟ್ ಬ್ಯಾಂಕ್ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಪರ್ಧೆಯಿಂದ ಮತಗಳು ವಿಭಜನೆಯಾಗಿ ಇದೇ ಗೌಡರು ಸೋಲನುಭವಿಸಬೇಕಾಗಿತ್ತು. ಆದರೆ, ಈ ಬಾರಿ ಹೆಚ್ಚಿನ ಜನರು ತಮ್ಮತ್ತ ಒಲವು ತೋರಿಸಿದ್ದಾರೆ ಎಂಬ ಖುಷಿಯಲ್ಲಿದ್ದಾರೆ ಬಚ್ಚೇಗೌಡರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕಾಂಗ್ರೆಸ್, 2 ಜೆಡಿಎಸ್ ಮತ್ತು ಒಂದು ಬಿಜೆಪಿ ಸ್ಥಾನವನ್ನು ಬಿಜೆಪಿ ಹೊಂದಿದೆ. ಬಹುತೇಕ ಕಡೆ ಕಮಲ ಪ್ರಾಬಲ್ಯ ಕಡಿಮೆ ಇದೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಲ್ಲಿ ಸ್ಪರ್ಧೆ ಎದುರಿಸಿದ್ದು ಮೊಯ್ಲಿಗೆ ಅನುಕೂಲವಾಗಿದೆ. ಮೈತ್ರಿಯಿಂದ ವೀರಪ್ಪ ಮೊಯ್ಲಿ ಮತ್ತೊಮ್ಮೆ ಗೆಲುವು ಸಾಧಿಸಲಿದ್ದಾರೆ ಅನ್ನೋ ಮಾತುಗಳು ಈ ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.
ಹಿಂದೆ ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮೇಲ್ನೋಟಕ್ಕೆ ಒಂದಾಗಿದ್ದು, ಆಂತರಿಕವಾಗಿ ದಳಪತಿಗಳು ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎನ್ನಲಾಗ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲದಿದ್ದರೂ ಲೋಕ ಸಮರದಲ್ಲಿ ಮತ ಪ್ರಮಾಣ ಹೆಚ್ಚಿಸಿಕೊಂಡಿದೆ. ಇದರಿಂದ ಬಚ್ಚೇಗೌಡರ ಗೆಲುವು ಖಚಿತ ಎನ್ನಲಾಗುತ್ತಿದೆ. ಈ ನಡುವೆ ಮತದಾರರು ಮತದಾನದ ವೇಳೆ ಯಾರಿಗೆ ಹೆಚ್ಚು ಮತ ಹಾಕಿ ಗೆಲ್ಲಿಸಿದ್ದಾರೆ. ಯಾರನ್ನು ಸೋಲಿಸಿದ್ದಾರೆ ಅನ್ನೋದು ಮೇ 23 ರಂದೇ ತಿಳಿಯಲಿದೆ.