ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು 263 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಕಳೆದ ಕೆಲವು ದಿನಗಳಿಂದ ಕೊಂಚ ನೆಮ್ಮದಿ ನೀಡಿದ ಕೊರೊನಾ ಇದೀಗ ಜಿಲ್ಲಾಡಳಿತಕ್ಕೆ ಶಾಕ್ ನೀಡಿದೆ.
ಚಿಕ್ಕಬಳ್ಳಾಪುರ 66, ಬಾಗೇಪಲ್ಲಿ 30, ಚಿಂತಾಮಣಿ 91, ಗೌರಿಬಿದನೂರು 17, ಗುಡಿಬಂಡೆ 11, ಶಿಡ್ಲಘಟ್ಟ 48 ಸೋಂಕಿತರು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7222ಕ್ಕೆ ಏರಿಕೆಯಾಗಿದೆ.
ಅದೇ ರೀತಿ ಚಿಕ್ಕಬಳ್ಳಾಪುರ 10 ಹಾಗೂ ಗೌರಿಬಿದನೂರಿನಲ್ಲಿ 2, ಚಿಂತಾಮಣಿ 13, ಗುಡಿಬಂಡೆಯಲ್ಲಿ ಓರ್ವ ಸಂಪೂರ್ಣ ಗುಣಮುಖಗೊಂಡು ಬಿಡುಗಡೆಯಾಗಿದ್ದು, ಒಟ್ಟು ಗುಣಮುಖಗೊಂಡವರ ಸಂಖ್ಯೆ 5752ಕ್ಕೆ ಏರಿಕೆಯಾಗಿದೆ.
ಇನ್ನೂ 40 ಸೋಂಕಿತರಿಗೆ ಐಎಲ್‌ಎ ಸಂಪರ್ಕ ಸೇರಿದಂತೆ 10 ಕೊರೊನಾ ವಾರಿಯರ್ಸ್‌ಗೆ ಸೋಂಕು ದೃಢಪಟ್ಟಿದ್ದು, ಉಳಿದ 213 ಸೋಂಕಿತರಿಗೆ ಸೋಂಕಿತರ ಸಂಪರ್ಕದಿಂದ ಬಂದಿದೆ.