ETV Bharat / state

ಪಡಿತರ ನೀಡುವ ವಿಚಾರದಲ್ಲಿ ಜಾತಿ ನಿಂದನೆ, ಹಲ್ಲೆ ಆರೋಪ: ನೊಂದ ಮಹಿಳೆ ಮನೆಗೆ ಸಚಿವ ಸುಧಾಕರ್​ ಭೇಟಿ - ಕಾಟೇನಹಲ್ಲಿ ಪಡಿತರ ನೀಡುವ ವಿಚಾರದಲ್ಲಿ ಜಾತಿ ನಿಂದನೆ

ನ್ಯಾಯಬೆಲೆ ಅಂಗಡಿಯಲ್ಲಿ ಮಣ್ಣು ಮಿಶ್ರಿತ ಅಕ್ಕಿ ನೀಡಿದ್ದನ್ನು ಪ್ರಶ್ನಿಸಿದ ಫಲಾನುಭವಿ ಮಹಿಳೆಯ ಮೇಲೆ ಪಡಿತರ ಅಂಗಡಿ ಮಾಲೀಕರ ಅವಹೇಳನಕಾರಿ ಮಾತು ಹಾಗೂ ಹಲ್ಲೆ ನಡೆಸಿದ ಆರೋಪ ಚಿಕ್ಕಬಳ್ಳಾಪೂರ ಜಿಲ್ಲೆಯಲ್ಲಿ ಕೇಳಿ ಬಂದಿದೆ. ವಿಚಾರ ತಿಳಿದು ಸಿಚಿವ ಡಾ. ಕೆ. ಸುಧಾಕರ್​ ನೊಂದ ಮಹಿಳೆಯ ಮನೆಗೆ ಭೇಟಿ ನೀಡಿ ವಿಚಾರಿಸಿದರು.

caste-abuse-allegations-while-giving-ration-in-katenahalli
ಸಚಿವ ಸುಧಾಕರ್​
author img

By

Published : Oct 17, 2021, 5:05 PM IST

ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ತಾಲೂಕಿನ ಕಾಟೇನಹಳ್ಳಿಯಲ್ಲಿ ಮಣ್ಣು ಮಿಶ್ರಿತ ಅಕ್ಕಿ ನೀಡಿದ್ದನ್ನು ಪ್ರಶ್ನಿಸಿದ ಫಲಾನುಭವಿ ಮಹಿಳೆಗೆ ನ್ಯಾಯ ಬೆಲೆ ಅಂಗಡಿ ಮಾಲೀಕರು ಅವಹೇಳನಕಾರಿಯಾಗಿ ಮಾತನಾಡಿ, ಹಲ್ಲೆ ನಡೆಸಿದ ಆರೋಪ ಜಿಲ್ಲೆಯಲ್ಲಿ ಕೇಳಿಬಂದಿತ್ತು. ಈ ಹಿನ್ನೆಲೆ ನೊಂದ ಮಹಿಳೆಯ ಮನೆಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್​ ಇಂದು ಭೇಟಿ ನೀಡಿ ಧೈರ್ಯ ತುಂಬಿದರು.

ಪಡಿತರ ನೀಡುವ ವಿಚಾರದಲ್ಲಿ ಜಾತಿ ನಿಂದನೆ, ಹಲ್ಲೆ ಆರೋಪ

ಕಾಟೇನಹಳ್ಳಿ ಪಡಿತರ ಮಳಿಗೆಯಲ್ಲಿ ಮಣ್ಣು ಮಿಶ್ರಿತ ಅಕ್ಕಿ ನೀಡಿದ್ದಕ್ಕೆ ದಲಿತ ಮಹಿಳೆ ನಾರಾಯಣಮ್ಮ ಎಂಬುವರು ನ್ಯಾಯಬೆಲೆ ಅಂಗಡಿ ಮಾಲೀಕರಾದ ಪದ್ಮಮ್ಮ ಎಂಬುವರನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಪದ್ಮಮ್ಮ, ಅವಾಚ್ಯವಾಗಿ ನಿಂದಿಸಿ, ಇದನ್ನೇ ತಿನ್ನಿ ಎಂದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವಿಚಾರ ತಿಳಿದ ಸಚಿವ ಡಾ. ಕೆ. ಸುಧಾಕರ್ ಅವರು ನೊಂದ ಮಹಿಳೆಯ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದರು. ಘಟನೆ ಕುರಿತು ಗುಡಿಬಂಡೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.