ETV Bharat / state

ಕೆಲಸಕ್ಕೆ ಹಾಜರಾದ ಕೆಎಸ್ಆರ್‌ಟಿಸಿ ಸಿಬ್ಬಂದಿಗೆ ತರಾಟೆ: 5 ಜನ ನೌಕರರ ಪತ್ನಿಯರ ವಿರುದ್ಧ ದೂರು!

author img

By

Published : Apr 14, 2021, 10:10 PM IST

ಗೌರಿಬಿದನೂರು ಕೆಎಸ್​ಆರ್​ಟಿಸಿ ಡಿಪೋದಿಂದ ಹೋರಟ ಬಸ್ಸನ್ನು ಸಾರಿಗೆ ನೌಕರರ ಪತ್ನಿಯರು ಹಾಗೂ ಕುಟುಂಬಸ್ಥರು ತಡೆದು ಚಾಲಕನನ್ನು ನಿಂದಿಸಿ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದರು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಹಿಳೆಯರ ಮೇಲೆ ಪ್ರಕರಣ ದಾಖಲಿಸಲಾಗಿದೆ.

case-filed-on-transport-workers-wives
case-filed-on-transport-workers-wives

ಚಿಕ್ಕಬಳ್ಳಾಪುರ: ಕರ್ತವ್ಯಕ್ಕೆ ಹಾಜರಾದ ಕೆಎಸ್ಆರ್​ಟಿಸಿ ಸಿಬ್ಬಂದಿಗೆ ನೌಕರರ ಕುಂಬಸ್ಥರು ಬಸ್ ತಡೆದು ಪ್ರತಿಭಟನೆ ನಡೆಸಿದ ಹಿನ್ನೆಲೆ ಐವರು ಮಹಿಳೆಯರ ವಿರುದ್ಧ ಗೌರಿಬಿದನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಾರಿಗೆ ಮುಷ್ಕರ ಆರಂಭವಾಗಿ 11 ದಿನವಾಗಿದ್ದು, ಸರ್ಕಾರದ ಹಾಗೂ ನೌಕರರ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ನೌಕರರ ಕುಟುಂಬಸ್ಥರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನಾನಿರತ ಮಹಿಳೆಯರು

ಕಳೆದ ಸೋಮವಾರ ಸಂಜೆ ಗೌರಿಬಿದನೂರು ಕೆಎಸ್​ಆರ್​ಟಿಸಿ ಡಿಪೋದಿಂದ ಹೋರಟ ಬಸ್ಸನ್ನು ಸಾರಿಗೆ ನೌಕರರ ಪತ್ನಿಯರು ಹಾಗೂ ಕುಟುಂಬಸ್ಥರು ತಡೆದು ಚಾಲಕನನ್ನು ನಿಂದಿಸಿ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪಿಎಸ್ಐ ಪ್ರಸನ್ನ ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದು ಪ್ರತಿಭಟನಾನಿರತ ಮಹಿಳೆಯರನ್ನು ಸಮಾಧಾನಪಡಿಸಲು ಯತ್ನಿಸಿದ್ದು, ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆದಿತ್ತು.

ಈ ಕುರಿತು ಗೌರಿಬಿದನೂರು ಘಟಕದ ವ್ಯವಸ್ಥಾಪಕರಾದ ಶಿವಪ್ಪ ನಾಯ್ಕ್ ಠಾಣೆಗೆ ದೂರು ನೀಡಿದ್ದು, ಪ್ರತಿಭಟನಾನಿರತ ಸೌಭಾಗ್ಯ, ರೇಷ್ಮಾ, ಜ್ಯೋತಿ, ಸೋನುಬಾಯಿ, ಅನಿತಾ ನಾಯಕ್ ಎಂಬ ಮಹಿಳೆಯರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.