ಚಿಕ್ಕಬಳ್ಳಾಪುರ: ವಿದ್ಯುತ್ ತಂತಿ ಸ್ಪರ್ಶಿಸಿ ಗಾರೆ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.
ಮಹಮ್ಮದ್ (35) ಮೃತ ಕಾರ್ಮಿಕ ಎಂದು ತಿಳಿದು ಬಂದಿದೆ. ಈತ ನಗರದ ಎನ್ಪಿಒ ರಸ್ತೆಯ ರೆಹಮಾನ್ ಎಂಬುವರ ಮನೆಗೆ ಗಾರೆ ಕೆಲಸಕ್ಕೆ ಬಂದಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ವಿದ್ಯುತ್ ತಂತಿಗೆ ಸಿಲುಕಿ ಕಂಬದ ಮೇಲೆಯೇ ಮಹಮ್ಮದ್ ಸುಟ್ಟು ಕರಕಲಾಗಿದ್ದಾನೆ. ತಂತಿಯ ಮೇಲೆಯೇ ಶವ ನೇತಾಡುತ್ತಿದ್ದುದರಿಂದ ಕೆಲಸಮಯ ಭಯದ ವಾತಾವರಣ ನಿರ್ಮಾಣವಾಗಿತ್ತು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.