ಚಿಕ್ಕಬಳ್ಳಾಪುರ: ಇಲ್ಲಿನ ಗುಡಿಬಂಡೆ ಪಟ್ಟಣ ಪಂಚಾಯಿತಿಯಲ್ಲಿ ಶೂನ್ಯ ಸದಸ್ಯರಿದ್ದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ಒಲಿದುಬಂದಿದೆ.
ಭಾರಿ ಕುತೂಹಲ ಕೆರಳಿಸಿದ್ದ ಪ.ಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ 6 ಸ್ಥಾನದಲ್ಲಿ ಗೆದ್ದಿತ್ತು. ಆದರೆ, ಅಧಿಕಾರವನ್ನು ಬಿಜೆಪಿ ತೆಕ್ಕೆಗೆ ಬಿಟ್ಟುಕೊಟ್ಟಿದ್ದರಿಂದ ಕಾಂಗ್ರೆಸ್ ಶಾಸಕ ಎಸ್. ಎನ್ ಸುಬ್ಬಾರೆಡ್ಡಿಗೆ ಭಾರಿ ಮುಖಭಂಗವಾಗಿದೆ.
ಹನ್ನೊಂದು ಸದಸ್ಯರಿದ್ದ ಪ. ಪಂಚಾಯಿತಿಯಲ್ಲಿ 6 ಕಾಂಗ್ರೆಸ್, 2 ಜೆಡಿಎಸ್, 3 ಪಕ್ಷೇತರರು ಕಳೆದ ಐದು ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ವಿಜೇತರಾಗಿದ್ದರು. ಆದರೆ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯದೆ ನೆನೆಗುದಿಗೆ ಬಿದ್ದಿತ್ತು.
ನಿನ್ನೆ ನಡೆದ ಪ.ಪಂ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನಿಂದ ನಗೀನ, ಪಕ್ಷೇತರರಾಗಿ ಬಷಿರಾ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷೇತರಾಗಿ ಜಿ.ಎಂ.ಅನಿಲ್ ಕುಮಾರ್, ಕಾಂಗ್ರೆಸ್ನಿಂದ ವಿಕಾಸ್ ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಮತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ನಗೀನ 3 ಮತಗಳನ್ನು ಪಡೆದಿದ್ದಾರೆ. ಇವರ ವಿರುದ್ಧ ಬಷಿರಾ 7 ಮತಗಳು ಪಡೆದು ಅಧ್ಯಕ್ಷ ಸ್ಥಾನ ವಿಜೇತರಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿಕಾಸ್ ಮತಗಳು ಪಡೆದಿದ್ದು, ಇವರ ವಿರುದ್ಧ ಪಕ್ಷೇತರ ಜಿ.ಎಂ.ಅನಿಲ್ ಕುಮಾರ್ 7 ಮತಗಳನ್ನು ಪಡೆದು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು. ಈ ಮಧ್ಯೆ ಕಾಂಗ್ರೆಸ್ನ 6 ಸದಸ್ಯರ ಪೈಕಿ ಇಬ್ಬರು ಸದಸ್ಯರು ಗೈರು ಹಾಜರಾಗಿದ್ದು, ಒಬ್ಬ ಸದಸ್ಯೆ ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರರಾಗಿ ಸ್ಪರ್ಧಿಸಿ ಪಟ್ಟಗಿಟ್ಟಿಸಿಕೊಂಡರು.
ಶಾಸಕ ಮತ್ತು ಎಂ.ಪಿ.ಮತ: ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಮತದಾನ ಮಾಡಲು ಶಾಸಕರಿಗೆ ಮತ್ತು ಲೋಕಸಭಾ ಸದಸ್ಯರಿಗೆ ಅಧಿಕಾರ ಇದೆ. ಲೋಕಸಭಾ ಸದಸ್ಯ ಬಚ್ಚೇಗೌಡ ಮತದಾನ ಮಾಡಿದರೆ, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕಾಂಗ್ರೆಸ್ ಬಹುಮತ ಇದ್ದರೂ ಅಧಿಕಾರ ವಂಚಿತವಾಗಿದ್ದಕ್ಕೆ ಅವರು ಮತ ಚಲಾವಣೆ ಮಾಡಲಿಲ್ಲ.
ಅಧ್ಯಕ್ಷ, ಉಪಾಧ್ಯಕ್ಷರು ಬಿಜೆಪಿಗೆ: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಬಷೀರಾ ಮತ್ತು ಜಿ. ಎಂ ಅನಿಲ್ ಕುಮಾರ್ ಬಿಜೆಪಿ ಸೇರ್ಪಡೆಗೊಂಡಿದ್ದೇವೆ ಎಂದರು.
ಪುರಸಭೆಗೆ ಪಟ್ಟು: ಲೋಕಸಭಾ ಸದಸ್ಯ ಬಚ್ಚೇಗೌಡ ಮಾತನಾಡಿ, ನೂತನವಾಗಿ ಚುನಾಯಿತರಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಶುಭಾಶಯಗಳನ್ನು ಕೋರಿದರು. ಅಲ್ಲದೇ, ಅವರ ಕೋರಿಕೆಯಂತೆ ಗುಡಿಬಂಡೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮಾಡಲು ನನ್ನ ಕೈಯಲ್ಲಾದ ಸಹಾಯ ಮಾಡಿ ಸಹಕರಿಸುತ್ತೇನೆ. ಇದಕ್ಕೆ ಬೇಕಾದ ಸೂಕ್ತ ಕ್ರಮವಹಿಸುತ್ತೇನೆ ಎಂದರು.
ಇದನ್ನೂ ಓದಿ: ಉಪಚುನಾವಣೆ ಫಲಿತಾಂಶ.. ಸಿಎಂಗೆ ಮುಖಭಂಗ.. ಕಾಂಗ್ರೆಸ್ಗೆ ಬಂಪರ್.. ಜೆಡಿಎಸ್ಗೆ ಠೇವಣಿ ನಷ್ಟ..