ETV Bharat / state

ಕೋಮು ಗಲಭೆಗಳಾಗ್ತಿದ್ರೂ ಕೇಂದ್ರ ಸರ್ಕಾರ ಮುಗ್ದರ ರೀತಿ ನೋಡುವುದು ಸರಿಯಲ್ಲ.. ಮಾಜಿ ಪ್ರಧಾನಿ ದೇವೇಗೌಡ - ಗಲಬೆಗಳ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳ ಬೇಕು

ಹುಬ್ಬಳ್ಳಿಯಲ್ಲಿ ಕೋಮು ಗಲಭೆಗೆ ರಾಷ್ಟ್ರೀಯ ಪಕ್ಷಗಳೇ ಕಾರಣ. ಕೇಂದ್ರ ಸರ್ಕಾರ ಮುಗ್ದರ ರೀತಿ ನೋಡುತ್ತಿರುವುದು ಸರಿಯಲ್ಲ ಎಂದು ದೇವೇಗೌಡರು ಗಂಭೀರವಾಗಿ ಆರೋಪಿಸಿದರು..

BJP Congress parties blamed for communal riots
ಮಾಜಿ ಪ್ರಧಾನಿ ದೇವೇಗೌಡ
author img

By

Published : Apr 18, 2022, 7:53 PM IST

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೇ ನೇರ ಕಾರಣ. ಗಲಭೆಗೆ ಕಾರಣವಾದ ಎರಡೂ ದೊಡ್ಡ ದೊಡ್ಡ ಪಕ್ಷಗಳು. ಜನರು ಈ ಬಗ್ಗೆ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಗಂಭೀರ ಆರೋಪ ಮಾಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಜಲಧಾರೆ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಕೋಮು ಗಲಭೆಗೆ ಸಂಬಂಧಿಸಿದಂತೆ ಹೇಳಿಕೆ ಕೊಟ್ಟಿದ್ದು, ರಾಜ್ಯದಲ್ಲಿ ಕೋಮುಗಲಭೆ ಆಗುತ್ತಿದ್ರೂ ಕೇಂದ್ರ ಸರ್ಕಾರ ಏನು ಮಾಡುತ್ತಿದೆ?. ಈ ವಿಚಾರಗಳನ್ನು ನೋಡಿಕೊಂಡು ಸುಮ್ಮನಿರುವುದು ಸರಿಯಲ್ಲ. ಗಲಭೆಗೆ ಕಾರಣ ಯಾರು ಎಂಬುದು ತನಿಖೆ ನಡೆದು ಅವರ ಮೇಲೆನ ಕ್ರಮಕೈಗೊಳ್ಳಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಯಾಕೆ ಮುಗ್ದರಾಗಿ ನೋಡಿತ್ತಿದೆ ಎಂದು ಪ್ರಶ್ನಿಸಿದರು.

ಕೋಮು ಗಲಭೆಗೆ ಬಿಜೆಪಿ-ಕಾಂಗ್ರೆಸ್ ಪಕ್ಷಗಳೇ ಕಾರಣ ಎಂದು ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರು ಆರೋಪಿಸಿದರು..

ಇಲ್ಲಿ ಕಾಂಗ್ರೆಸ್ ಬಿಜೆಪಿ ನ್ಯಾಷನಲ್ ಪಾರ್ಟಿ ಅವರಿಗೆ ಹೈಕಮಾಂಡ್ ಇದೆ. ಅದರ ಬಗ್ಗೆ ಅವರು ತೀರ್ಮಾನ ತೆಗೆದುಕೊಳ್ಳಬೇಕು. ಅದು ಬಿಟ್ಟು ನಾನು ಸಿದ್ಧರಾಮಯ್ಯನ ಬಗ್ಗೆ ಮಾತನಾಡಬೇಕಾಗುತ್ತಾ ಎಂದು ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರದಲ್ಲಿ ಹೇಳಿದರು.

ಇದನ್ನೂ ಓದಿ: ಭೂಸೇನಾ ಮುಖ್ಯಸ್ಥರಾಗಿ ಲೆ. ಜನರಲ್ ಮನೋಜ್ ಪಾಂಡೆ ನೇಮಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.