ಚಿಕ್ಕಬಳ್ಳಾಪುರ : ರಸ್ತೆ ದಾಟುತ್ತಿರುವಾಗ ಭಿಕ್ಷುಕಿ ಆಯತಪ್ಪಿ ಬಿದ್ದಿದ್ದು, ಈ ವೇಳೆ ಭಿಕ್ಷುಕಿ ಮೇಲೆ ಲಾರಿ ಚಕ್ರ ಹರಿದಿರುವ ಘಟನೆ ಶಿಡ್ಲಘಟ್ಟದ ಸಿವಿಲ್ ಬಸ್ ನಿಲ್ದಾಣದ ಬಳಿ ನಡೆದಿದೆ.
50 ವರ್ಷದ ಮಹಿಳೆ ಎಂದು ತಿಳಿದು ಬಂದಿದ್ದು, ಮಹಿಳೆ ನಗರದಲ್ಲಿ ಭಿಕ್ಷೆ ಬೇಡಿ ಜೀವನವನ್ನು ಸಾಗಿಸುತ್ತಿದ್ದಾಗಿ ತಿಳಿದು ಬಂದಿದೆ. ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ರಸ್ತೆ ದಾಟುವ ವೇಳೆ ಅಪಘಾತ ಸಂಭವಿಸಿದೆ.
ಸದ್ಯ ಮಹಿಳೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.