ETV Bharat / state

ವಿವಾದಿತ ವೀರಸೌಧಕ್ಕೆ ಭದ್ರತೆ: ಬೆಂಗಳೂರಿನಿಂದ ವಿದುರಾಶ್ವತ್ಥಕ್ಕೆ ಬಜರಂಗದಳ ಬೈಕ್ ಱಲಿ

author img

By

Published : May 29, 2022, 7:51 PM IST

ಅದು ಕರ್ನಾಟಕದ ಜಲಿಯನ್ ವಾಲಾಬಾಗ್ ಖ್ಯಾತಿಯ ಸ್ವಾತಂತ್ರ್ಯ ಸಂಗ್ರಾಮದ ಪುಣ್ಯಭೂಮಿ. ಅಲ್ಲಿರುವ ವೀರಸೌಧಕ್ಕೆ‌ ಈಗ ಎಲ್ಲಿಲ್ಲದ ಭದ್ರತೆ ಒದಗಿಸಲಾಗಿದೆ. ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ ನೂರಕ್ಕೂ ಹೆಚ್ಚು ಮಂದಿ ಪೊಲೀಸರ ಕಾವಲು ಕಾಯುತ್ತಿದ್ದಾರೆ. ಹಿಂದೂ ಕಾರ್ಯಕರ್ತರು ಆಗಮಿಸುತ್ತಿರುವ ಹಿನ್ನೆಲೆ ವಿವಾದಿತ ವೀರಸೌಧಕ್ಕೆ ಹೆಜ್ಜೆ ಹೆಜ್ಜೆಗೂ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.

Security for the disputed veerasouda
ವಿವಾದಿತ ವೀರಸೌಧಕ್ಕೆ ಭದ್ರತೆ

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಗ್ರಾಮದ ವೀರಸೌಧಕ್ಕೆ ಈಗ ಎಲ್ಲಿಲ್ಲದ ಭದ್ರತೆ ನೀಡಲಾಗಿದೆ. ವೀರಸೌಧದ ಭದ್ರತೆಗೆ 100ಕ್ಕೂ ಹೆಚ್ಚು ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ಡಿವೈಎಸ್ಪಿ ವಾಸುದೇವ್ ನೇತೃತ್ವದಲ್ಲಿ ಮೂವರು ಸಿಪಿಐ, ನಾಲ್ವರು ಪಿಎಸ್ಐ ಸೇರಿದಂತೆ ಎರಡು ಕೆಎಸ್​ಆರ್​ಪಿ, ಎರಡು ಡಿಎಆರ್ ತುಕಡಿಗಳನ್ನ ನಿಯೋಜನೆ ಮಾಡಲಾಗಿದೆ.

ವಿದುರಾಶ್ವತ್ಥದ ವೀರಸೌಧದ ಚಿತ್ರ ಗ್ಯಾಲರಿ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ವೀರಸೌಧದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕದ ಚಿತ್ರಪಟ ಗ್ಯಾಲರಿಯಲ್ಲಿನ ಕೆಲ ಫೋಟೋಗಳಡಿ ಹಿಂದೂ ಕೋಮುವಾದ, ಮುಸ್ಲಿಂ ಕೋಮುವಾದ, ಎಡ ಪಂಥೀಯ ಎಂಬ ಪದಬಳಕೆ ಮಾಡಿರೋದು ವಿವಾದದ ರೂಪ ಪಡೆದುಕೊಂಡಿದೆ. ಈ ಪದಗಳ ಬಳಕೆಗೆ ಹಿಂದೂ ಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಆ ಪದಗಳನ್ನು ತೆಗೆದು ಹಾಕುವಂತೆ ಆಗ್ರಹಿಸಿವೆ.

ವಿದುರಾಶ್ವತ್ಥ ಗ್ರಾಮದ ವೀರಸೌಧಕ್ಕೆ ಭದ್ರತೆ

ಈ ವಿವಾದ ಕಳೆದ ಒಂದು ತಿಂಗಳಿನಿಂದ ಉದ್ಭವಿಸಿದ್ದು, ಚಿತ್ರ ಗ್ಯಾಲರಿ ಮೇಲೆ ಹಿಂದೂ ಸಂಘಟನೆಗಳ ದಾಳಿಯ ಆತಂಕದ ಭೀತಿ ಎದುರಾಗಿದೆ.‌ ಇಂತಹ ವಿವಾದಾತ್ಮಕ ಪರಿಸ್ಥಿತಿ ನಡುವೆ ಇಂದು ಆಜಾದಿ ಕಾ ಅಮೃತ್​ ಮಹೋತ್ಸವದ ಅಂಗವಾಗಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಬೆಂಗಳೂರಿನ ಫ್ರೀಡಂ ಪಾರ್ಕ್​ನಿಂದ ವಿದುರಾಶ್ವತ್ಥಕ್ಕೆ ಬೈಕ್ ಱಲಿ ಮಾಡಿದರು.

ಇದನ್ನೂ ಓದಿ: ಮಡಿಕೇರಿ ಕೋಟೆ ಅಬ್ಬಿ ಜಲಪಾತದಲ್ಲಿ ಮುಳುಗಿ ಮೂವರು ಪ್ರವಾಸಿಗರು ಸಾವು

ಬೈಕ್ ಱಲಿ ಮೂಲಕ ಬಂದ ನೂರಾರು ಮಂದಿ ಕಾರ್ಯಕರ್ತರು ವಿದುರಾಶ್ವತ್ಥದ ಹುತಾತ್ಮರ ಸ್ಮಾರಕ ಸ್ತೂಪಕ್ಕೆ ಪುಷ್ಪ ನಮನ ಸಲ್ಲಿಸಿದರು. ಆದ್ರೆ ಇದೇ ಕಾರ್ಯಕರ್ತರು ಚಿತ್ರ ಗ್ಯಾಲರಿಗೂ ನುಗ್ಗುವ ಆತಂಕ ಇದ್ದ ಕಾರಣ ಭಾರಿ ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಚಿತ್ರ ಗ್ಯಾಲರಿಯಲ್ಲಿರುವ ಪದಗಳನ್ನ ತೆಗೆದು ಹಾಕುವಂತೆ ಸರ್ಕಾರಕ್ಕೆ‌ ಪತ್ರ ಬರೆದು ಕಾನೂನು ಹೋರಾಟ‌ ನಡೆಸುವುದಾಗಿ ಹಿಂದೂ ಪರ ಸಂಘಟನೆಗಳ ಮುಖಂಡರು ಹೇಳಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.