ETV Bharat / state

ಪಿಂಚಣಿ, ಅಂಗವಿಕಲ, ವೃದ್ಧಾಪ್ಯ ವೇತನಕ್ಕಾಗಿ ಜನರ ಅಲೆದಾಟ... ಕೊರೊನಾ ಮಧ್ಯೆ ನಿರ್ಲಕ್ಷ್ಯ ಸರಿನಾ?

ಅಂಚೆ ಇಲಾಖೆಯ ಅಧಿಕಾರಿಗಳ ಸಮಯದ ನಿರ್ಲಕ್ಷ್ಯಕ್ಕೆ ಬಾಗೇಪಲ್ಲಿ ತಾಲೂಕಿನ ಜನರು ನಿತ್ಯ ಪರದಾಡುವಂತಾಗಿದೆ. ವೃದ್ಧಾಪ್ಯ ವೇತನ, ಅಂಗವಿಕಲರ ಮಾಶಾಸನ ಸಮರ್ಪಕವಾಗಿ ವಿತರಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

bagepalli-post-office-staff-problem
ವೃದ್ಧಾಪ್ಯ ವೇತನಕ್ಕಾಗಿ ಅಲೆದಾಟ
author img

By

Published : Jul 7, 2020, 3:22 PM IST

ಬಾಗೇಪಲ್ಲಿ: ತಾಲೂಕಿನ ಗ್ರಾಮೀಣ ಭಾಗದ ಹಲವೆಡೆ ಅಂಚೆ ಇಲಾಖೆ ಸಿಬ್ಬಂದಿ ಕಚೇರಿಗೆ ಸರಿಯಾದ ಸಮಯಕ್ಕೆ ಬರುತ್ತಿಲ್ಲ, ಸಮರ್ಪಕವಾಗಿ ವೃದ್ಧಾಪ್ಯ ವೇತನ, ಅಂಗವಿಕಲರ ಮಾಶಾಸನವನ್ನು ಸಮರ್ಪಕವಾಗಿ ವಿತರಿಸುವುದಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಫಲಾನುಭವಿಗಳನ್ನು ಕಚೇರಿಗೆ ಬರುವಂತೆ ತಿಳಿಸಿ ನಿತ್ಯವೂ ಅವರನ್ನು ಅಲೆದಾಡುವಂತೆ ಮಾಡುತ್ತಿದ್ದಾರೆ ಎಂದು ತಾಲೂಕಿನ ಗ್ರಾಮೀಣ ಅಂಚೆ ಕಚೇರಿ ಸಿಬ್ಬಂದಿ ವಿರುದ್ಧ ಜನರು ಕಿಡಿಕಾರುತ್ತಿದ್ದಾರೆ.

ಇದಕ್ಕೆ ತಾಜಾ ನಿದರ್ಶನವೆಂಬಂತೆ ತಾಲೂಕಿನ ಯಲ್ಲಂಪಲ್ಲಿ ಗ್ರಾಮದ ಅಂಚೆ ಕಚೇರಿಯ ಅಧಿಕಾರಿಗಳ ಕಾರ್ಯ ವೈಖರಿ. ನನಗೆ 6 ತಿಂಗಳಿಂದ ವೃದ್ಧಾಪ್ಯ ವೇತನ ವಿತರಣೆಯಾಗಿಲ್ಲ. ವಯಸ್ಸಾದವರಿಗೆ ವೇತನ ನೀಡದೇ ಅಂಚೆ ಸಿಬ್ಬಂದಿ ತೊಂದರೆ ನೀಡುತ್ತಿದ್ದಾರೆ. ಪ್ರತಿನಿತ್ಯ ಕಚೇರಿಗೆ ಹೋಗಿ ಅಂಗಲಾಚಿದರೂ ವೃದ್ಧಾಪ್ಯ ವೇತನ ನೀಡುತ್ತಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ಜೀವನ ಸಾಗಿಸುವುದು ಕಷ್ಟವಾಗಿದೆ ಎಂದು ವೃದ್ಧೆ ವೆಂಕಟಮ್ಮ ಕಣ್ಣೀರು ಸುರಿಸಿದರು.

ಕಳೆದ 4 ತಿಂಗಳುಗಳಿಂದ ಮಾಶಾಸನ ವಿತರಣೆಯಾಗಿಲ್ಲ, ಕೇಳಿದ್ರೆ ಇನ್ನೂ ಬಂದಿಲ್ಲ ಎನ್ನುತ್ತಾರೆ. ಮುಖ್ಯ ಅಂಚೆ ಕಚೇರಿಗೆ ಹೋಗಿ ಕೇಳಿದರೆ, ಯಲ್ಲಂಪಲ್ಲಿ ಶಾಖೆ ಅಂಚೆಯಲ್ಲಿ ವಿಚಾರಿಸಿ ಎನ್ನುತ್ತಾರೆ. ಅಂಗವಿಕಲರಿಗೆ 4 ತಿಂಗಳಾದರೂ ಮಾಶಾಸನ ನೀಡದಿರುವುದು ಖಂಡನೀಯ ಎಂದು ದಿವ್ಯಾಂಗ ಬಾಲಕ ನವೀನ್ ಎಂಬುವರ ತಂದೆ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.

ಅಂಚೆ ಶಾಖಾ ಕಚೇರಿ ಅಧಿಕಾರಿ ಬೆಳಗ್ಗೆ 11 ಗಂಟೆಗೆ ಬರುತ್ತಾರೆ. ವೃದ್ಧರು, ಅಂಗವಿಕಲರು ಕಚೇರಿ ಮುಂದೆ ಕಾಯಬೇಕು. ಪುಸ್ತಕದಲ್ಲಿ ನೀಡಲಾಗಿದೆ ಎಂದು ಬರೆಯುತ್ತಾರೆ. ಆದರೆ ಹಣ ಖಾತೆಗೆ ಬಂದಿರುವುದಿಲ್ಲ. ಈ ಹಿಂದೆ ಅಧಿಕಾರಿಯೊಬ್ಬರು ಮನೆ ಮನೆಗೆ ತೆರಳಿ ವೇತನ ನೀಡುತ್ತಿದ್ದರು. ಆದರೆ ಈಗಿನ ಅಧಿಕಾರಿ ಸಮರ್ಪಕವಾಗಿ ವೇತನಗಳನ್ನು ವಿತರಿಸುತ್ತಿಲ್ಲ. ತಿಂಗಳ ವೇತನ ಡ್ರಾ ಮಾಡಿ ಮನಬಂದಂತೆ ವಿತರಣೆ ಮಾಡುತ್ತಿದ್ದಾರೆ. ಕೂಡಲೇ ಇಂತಹ ಅಂಚೆ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು, ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ತೊಂದರೆ ಕೊಡುವ ಉದ್ದೇಶ ಇಲ್ಲ:

ಕಚೇರಿಯಲ್ಲಿ ನಾನೊಬ್ಬನೇ ಇದ್ದೇನೆ. ಗ್ರಾಮಗಳಿಗೆ ಹೋಗಿ ಅಂಚೆ ಕಾರ್ಡ್‌ಗಳನ್ನು ವಿತರಿಸಬೇಕು. ಕಚೇರಿಗೂ ಹೋಗಬೇಕು. ಅವಧಿಯೊಳಗೆ ಎಲ್ಲ ಕೆಲಸ ನಿರ್ವಹಿಸುತ್ತಿದ್ದೇನೆ. ಕೆಲವರಿಗೆ ಮುಖ್ಯ ಅಂಚೆ ಕಚೇರಿಯಿಂದ, ಉಪಖಜಾನೆಯಿಂದ ಖಾತೆಗಳಿಗೆ ಹಣ ಜಮಾವಣೆ ಆಗಿಲ್ಲ. ಬಿಡುಗಡೆಯಾಗಿರುವ ಹಣವನ್ನು ವಿತರಿಸಲಾಗುತ್ತಿದೆ. ಯಾರಿಗೂ ತೊಂದರೆ ಕೊಡುವ ಉದ್ದೇಶ ಇಲ್ಲವೆಂದು ಅಂಚೆ ಕಚೇರಿ ಅಧಿಕಾರಿ ಶಂಕರಪ್ಪ ತಿಳಿಸಿದರು.

ಏನೇ ಆಗಲಿ, ಅಧಿಕಾರಿಗಳ ಅವ್ಯವಸ್ಥೆಗಳ ನಡುವೆ ಗ್ರಾಮೀಣ ಜನತೆ ಬಳಲದಂತೆ ಕ್ರಮ ಕೈಗೊಳ್ಳಬೇಕು. ಅದೆಷ್ಟೋ ಅಸಹಾಯಕ ಜನರ ನಿತ್ಯ ಪರದಾಟ ನಿಲ್ಲಲಿ ಎಂಬುದೇ ನಮ್ಮ ಕಳಕಳಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.