ಬಾಗೇಪಲ್ಲಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ.
![Man arrested for selling marijuana](https://etvbharatimages.akamaized.net/etvbharat/prod-images/kn-ckb-01-smogling-av-kac10004_06092020070332_0609f_1599356012_433.jpg)
ವಡ್ರೇಪಾಳ್ಯದ ನಾರಾಯಣಪ್ಪ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಬಾಗೇಪಲ್ಲಿ ಪೊಲೀಸರು, ಆರೋಪಿಯನ್ನು ಬಂಧಿಸಿ ಬಂಧಿತನಿಂದ ಸುಮಾರು 1 ಲಕ್ಷ ಮೌಲ್ಯದ 2 ಕೆಜಿ 700 ಗ್ರಾಂ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಆಂಧ್ರದ ಪುಟ್ಟಪರ್ತಿಯಿಂದ ಗಾಂಜಾ ತಂದು ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದು ಹೋಗುವವರಿಗೆ ಮಾರಾಟ ಮಾರಾಟ ಮಾಡುತ್ತಿರುವುದಾಗಿ ಆರೋಪಿ ನಾರಾಯಣಪ್ಪ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ.
ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.