ಚಿಕ್ಕಬಳ್ಳಾಪುರ: ಲಾಕ್ಡೌನ್ನಲ್ಲಿ ಅಂಗಡಿ ತೆರೆದು ಮಾಸ್ಕ್ ಧರಿಸದೇ ವ್ಯಾಪಾರ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತಿಪ್ಪಗಾನಹಳ್ಳಿಯಲ್ಲಿ ನಡೆದಿದೆ.
ತಿಪ್ಪಗಾನಹಳ್ಳಿ ಗ್ರಾಮದಲ್ಲಿ ಲಾಕ್ಡೌನ್ ನಿಯಮ ಮೀರಿ ರಾಮಲಿಂಗ ಎಂಬಾತ ವ್ಯಾಪಾರ ಮಾಡುತ್ತಿದ್ದ. ಸಾಮಾಜಿಕ ಅಂತರ ಕಾಪಾಡುಕೋಳ್ಳದೆ ವ್ಯಾಪಾರದಲ್ಲಿ ತೊಡಗಿದ್ದನ್ನು ಕಂಡ ಸುಮತಿ ಎಂಬ ಆಶಾ ಕಾರ್ಯಕರ್ತೆ ಲಾಕ್ಡೌನ್ ಸಮಯದಲ್ಲಿ ಏಕೆ ಅಂಗಡಿ ತೆರೆಯುತ್ತಿರಾ, ನೀವು ಮಾಸ್ಕ್ ಕೂಡ ಧರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದರಿಂದ ರೊಚ್ಚಿಗೆದ್ದ ಅಂಗಡಿ ಮಾಲೀಕ ರಾಮಲಿಂಗ ಹಾಗೂ ಆನಂದ್ ಎಂಬುವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಆಶಾ ಕಾರ್ಯಕರ್ತೆ ತಲೆ ಮತ್ತು ಎದೆ ಭಾಗಕ್ಕೆ ಹಲ್ಲೆ ಮಾಡಿ ಅಮಾನೀಯವಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪವಿದೆ. ಹಲ್ಲೆಗೊಳಗಾದ ಸುಮತಿ ಸ್ಥಿತಿ ಚಿಂತಾಜನಕವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡಬಳ್ಳಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಬಳಿಕ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಪ್ರಜಾ ಪೀಡಕ ಸರ್ಕಾರ ತೈಲ ಬೆಲೆ ಏರಿಸಿ ಜನರ ಬದುಕು ನಾಶ ಮಾಡುತ್ತಿದೆ : ಕಾಂಗ್ರೆಸ್