ETV Bharat / state

ಚಿಕ್ಕಬಳ್ಳಾಪುರ.. ಯವತಿಯೊಂದಿಗೆ ಹೋಟೆಲ್​ಗೆ ತೆರಳಿದ ಯುವಕನ ಮೇಲೆ ಗುಂಪಿಂದ ಹಲ್ಲೆ: ಇಬ್ಬರ ಬಂಧನ - Etv Bharat Kannada

ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಕ್ಕೆ ಯುವಕನ ಮೇಲೆ ಬೆಳಗಿನ ಜಾವ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರಲ್ಲೂ ನಡೆದಿದೆ.

ಯುವಕನ ಮೇಲೆ ಹಲ್ಲೆ ಇಬ್ಬರ ಬಂಧನ
ಯುವಕನ ಮೇಲೆ ಹಲ್ಲೆ ಇಬ್ಬರ ಬಂಧನ
author img

By

Published : May 26, 2023, 5:49 PM IST

ಚಿಕ್ಕಬಳ್ಳಾಪುರ: ಯುತಿಯೊಂದಿಗೆ ಯುವಕನೊಬ್ಬ ಹೋಟೆಲ್​ಗೆ​ ಬಂದಾಗ, ಯುವಕರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿಯ ಹೋಟೆಲ್​ವೊಂದಕ್ಕೆ ಯವತಿಯೊಂದಿಗೆ ಹಲ್ಲೆಗೊಳಗಾದ ಯುವಕ ಬಂದಿರುತ್ತಾನೆ. ಇದನ್ನು ಗಮನಿಸಿದ ಯುವಕರ ಗುಂಪೊಂದು ಯವತಿಯೊಂದಿಗೆ ಬಂದಾತನ ಬಳಿ ತೆರಳಿ ಅವನ ಹಿನ್ನೆಲೆ ಬಗ್ಗೆ ವಿಚಾರಣೆ ನಡೆಸಿದ್ದಾರೆ.

ನಂತರ ಈ ಯುವತಿ ಜೊತೆ ನಿನಗೆ ಏನು ಸಂಬಂಧ ಇದೆ ಎಂದು ಪ್ರಶ್ನಿಸಿ ಹಲ್ಲೆ ಮಾಡಿದ್ದಾರೆ. ಇದರ ನಡುವೆ ಯುವತಿ, ಯುವಕನ ರಕ್ಷಣೆಗೆ ಮುಂದಾಗಿದ್ದಾಳೆ. ಆತನ ಮೇಲೆ ಹಲ್ಲೆ ನಡೆಸದಂತೆ ತಡೆಯಲು ಪ್ರಯತ್ನಿಸಿದ್ದಾಳೆ. ಬಳಿಕ ಆ ಗುಂಪು ಯುವತಿಗೆ ಪೋಷಕರ ದೂರವಾಣಿ ಸಂಖ್ಯೆ ಕೊಡುವಂತೆ ಬಲವಂತ ಮಾಡಿದ್ದಾರೆ. ಇದಕ್ಕೆ ಬೆದರಿದ ಯುವತಿ ಕ್ಷಮೆಯಾಚಿಸಿದ್ದಾಳೆ. ಇಷ್ಟಾದರೂ ಬಿಡದ ಯುವಕರ ಗುಂಪು ಯುವಕನ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಇದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ.

ಯುವಕರಿಂದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಫುರ ನಗರ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನಗರದ ನಕ್ಕಲಕುಂಟೆಯ 20 ವರ್ಷದ ಯುವಕ, ಹಾಗೂ 21 ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದರಿಂದ ನೊಂದ ಯುವತಿ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾಳೆ. ಯುವತಿ ನೀಡಿದ ದೂರಿನಡಿ ಪೊಲೀಸರು IPC ಸೆಕ್ಷನ್ 354 A And D, 341, 323, 153A, 504, 506 ಅಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿದ ನಂತರ ಬಂಧಿತರನ್ನು ಪೊಲೀಸರು ನ್ಯಾಯಾಧೀಶರ ನಿವಾಸಕ್ಕೆ ಕರದೊಯ್ದಿದ್ದಾರೆ. ಸದ್ಯ ಇಬ್ಬರಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಚಿಕ್ಕಮಗಳೂರಲ್ಲೂ ಯುವಕನ ಮೇಲೆ ಹಲ್ಲೆ: ಯುವತಿಯೊಂದಿಗೆ ಸ್ನೇಹ ಬೆಳಸಿದ ಹಿನ್ನೆಲೆ ಯುವಕನನ್ನು ನಡು ರಸ್ತೆಯಲ್ಲಿ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ನಡೆದಿದೆ. ಯುವತಿಯ ಜೊತೆ ಸ್ನೇಹ ಬೆಳಸಿದ್ದಾನೆ ಎಂಬ ಕಾರಣಕ್ಕೆ ಹಲ್ಲೆ ನಡಸಿದ್ದಾರೆ ಎನ್ನಲಾಗಿದೆ. ಬೆಳಗ್ಗೆ 4 ಗಂಟೆಗೆ ಸುಮಾರಿಗೆ ಯುವಕರ ಗುಂಪು ಹಲ್ಲೆ ನಡೆಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಯುವಕನನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.

ಯುವ ಸಂಘಟನೆಯೊಂದರ ಕಾರ್ಯಕರ್ತನಾಗಿದ್ದ ಎಂದು ಹೇಳಲಾಗುತ್ತಿದೆ. ಯುವಕನ ಕಣ್ಣಿಗೆ, ಎದೆ ಭಾಗಕ್ಕೆ, ಕಾಲಿಗೆ ಗಂಭೀರ ಗಾಯಗಳಾಗಿವೆ. ದ್ವೇಷದ ಹಿನ್ನೆಲೆ ಕೆಲವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಗಾಯಾಳು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಹೆಚ್ಚಿನ ತನಿಖೆಯನ್ನು ಮುಂದು ವರಿಸಿದ್ದಾರೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಬೆಳ್ತಂಗಡಿ ಯುವಕನ ಮೇಲೆ ನೈತಿಕ ಪೊಲೀಸ್​ಗಿರಿ; ನಾಲ್ಕು ಮಂದಿ ವಿರುದ್ಧ ಪ್ರಕರಣ ದಾಖಲು

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.