ETV Bharat / state

ವಿವಾದಿತ ಭೂಮಿ: ರೈತರು-ಅರಣ್ಯಾಧಿಕಾರಿಗಳ ಮಧ್ಯೆ ಹಗ್ಗಜಗ್ಗಾಟ - Chikkaballapura

ಶಿಡ್ಲಘಟ್ಟ ತಾಲೂಕಿನ ವರದನಾಯಕನಹಳ್ಳಿ ಬಳಿ ಒಂದೆಡೆ ಈ ಜಮೀನು ನಮ್ಮದೆಂದು ರೈತರು ನಿಂತಿದ್ರೆ, ಮತ್ತೊಂದು ಕಡೆ ಸರ್ಕಾರದ್ದು ಅಂತಾ ಅಧಿಕಾರಿಗಳು ಪಟ್ಟು ಹಿಡಿದಿದ್ದರು. ಈ ವೇಳೆ ವಿವಾದಿತ ಭೂಮಿಗಾಗಿ ರೈತರು ಹಾಗೂ ಅರಣ್ಯಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ರೈತರು-ಅರಣ್ಯಾಧಿಕಾರಿಗಳ ನಡುವೆ ಮಾತಿನ ಚಕಮಕಿ
author img

By

Published : Aug 29, 2019, 4:50 AM IST

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ವರದನಾಯಕನಹಳ್ಳಿ ಬಳಿ ವಿವಾದಿತ ಭೂಮಿಗಾಗಿ ರೈತರು ಹಾಗೂ ಅರಣ್ಯಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಒಂದೆಡೆ ಈ ಜಮೀನು ನಮ್ಮದೆಂದು ರೈತರು ನಿಂತಿದ್ರೆ, ಮತ್ತೊಂದು ಕಡೆ ಸರ್ಕಾರದ್ದು ಅಂತಾ ಅಧಿಕಾರಿಗಳು ಪಟ್ಟು ಹಿಡಿದಿದ್ದರು. ಇನ್ನೂ ವರದನಾಯಕನಹಳ್ಳಿ ಬಳಿ ಬ್ರಿಟಿಷರ ಕಾಲದಲ್ಲಿ 900 ಎಕರೆ ಭುಮಿಯನ್ನು ಸರ್ಕಾರಿ ಜಮೀನೆಂದು ಗುರುತಿಸಲಾಗಿತ್ತು. ಅದರಲ್ಲಿ 50 ಎಕರೆ ಜಮೀನಿನಲ್ಲಿ ಅರಣ್ಯ ಅಧಿಕಾರಿಗಳು ಗಿಡಗಳನ್ನು ನೆಡಲು ತೀರ್ಮಾನಿಸಿದ್ದು, ಈ ಪ್ರದೇಶದಲ್ಲಿ‌ ಗುಣಿಗಳನ್ನು ತೋಡಿದ್ದಾರೆ. ಆದರೆ ಇಲ್ಲಿನ ರೈತರು ಕೆಲವು ತಿಂಗಳುಗಳ ಹಿಂದೆ ಅರಣ್ಯ ಪ್ರದೇಶದಲ್ಲಿ ವ್ಯವಸಾಯ ಮಾಡುತ್ತಿದ್ದು, ಬಿತ್ತನೆ ಸಹ ಮಾಡಿದ್ದರು.

ರೈತರು-ಅರಣ್ಯಾಧಿಕಾರಿಗಳ ನಡುವೆ ಮಾತಿನ ಚಕಮಕಿ

ಇನ್ನೂ ಈ ಕುರಿತು ರೈತರಿಗೆ ಎಚ್ಚರಿಕೆ ನೀಡಿದರೂ ಅರಣ್ಯ ಇಲಾಖೆ ಗಿಡಗಳನ್ನು ಬೆಳೆಸಲು ನಿರ್ಮಿಸಿರುವ ಗುಂಡಿಗಳನ್ನು ಮುಚ್ಚಿ ವ್ಯವಸಾಯ ಮಾಡಿದ್ದಾರೆ. ಇದರಿಂದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು, ತಾಲೂಕಿನ ದಂಡಾಧಿಕಾರಿಗಳು ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ಗಿಡಗಳನ್ನು ನೆಡಲು ಮುಂದಾಗಿದ್ದಾರೆ.

ರೈತ ಸಂಘ ಹಾಗೂ ಹಸಿರು ಸೇನೆಯು ರೈತರು ಬೆಳೆದಿರುವ ಬೆಳೆಯನ್ನು ಕಟಾವು ಮಾಡುವವರೆಗೂ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿತು. ಬಳಿಕ ಅಧಿಕಾರಿಗಳು ಇದಕ್ಕೆ ಅನುಮತಿ ನೀಡಿದ್ದಾರೆ.

Intro:ವಿವಾದಿತ ಭೂಮಿಗಾಗಿ ರೈತರು ಹಾಗೂ ಅರಣ್ಯಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲುಕಿನ ವರದನಾಯಕನಹಳ್ಳಿ ಬಳಿ ನಡೆದಿದೆ.

Body:ಹೌದು ಒಂದು ಕಡೆ ಈ ಜಮೀನು ನಂದ್ದು ಅಂತಾ ರೈತರು ನಿಂತಿದ್ರೆ ಮತ್ತೊಂದು ಕಡೆ ಈ ಜಮೀನು ಸರ್ಕಾರದ್ದು ಅಂತಾ ಪಟ್ಟು ಹಿಡಿದಿರುವ ದೃಶ್ಯಗಳು ಇಲ್ಲಿ ಸರ್ವೆ ಸಾಮಾನ್ಯವಾಗಿದ್ದವು. ಇನ್ನೂ ಬ್ರಿಟಿಷರ ಕಾಲದಲ್ಲಿ 900 ಎಕರೆಗಳು ಸರ್ಕಾರದ್ದು ಎಂದು ಗುರುತಿಸಿಕೊಂಡಿವೆ.ಅದರಲ್ಲಿ 50 ಎಕರೆ ಹೆಚ್ಚು ಜಮೀನಿನಲ್ಲಿ ಅರಣ್ಯ ಅಧಿಕಾರಿಗಳು ಗಿಡಗಳನ್ನು ನೆಡಲು ತೀರ್ಮಾನಿಸಿದ್ದು ಈ ಪ್ರದೇಶದಲ್ಲಿ‌ ಗುಣಿಗಳನ್ನು ಏರ್ಪಡಿಸಿದ್ದಾರೆ.ಆದರೆ ಇಲ್ಲಿನ ರೈತರು ಕೆಲವು ತಿಂಗಳುಗಳ ಹಿಂದೆ ಅರಣ್ಯ ಪ್ರದೇಶದಲ್ಲಿ ವ್ಯವಸಾಯ ಮಾಡುತ್ತಿದ್ದು ಬಿತ್ತನೆ ಯನ್ನು‌ ಮಾಡಿಕೊಂಡಿದ್ದಾರೆ.

ಇನ್ನೂ ಇದರ ಬಗ್ಗೆ ರೈತರಿಗೆ ಎಚ್ಚರಿಕೆಯನ್ನು ಕೊಟ್ಟರು ಸಹ ಅರಣ್ಯ ಇಲಾಖೆ ಗಿಡಗಳನ್ನು ಬೆಳೆಸಲು ನಿರ್ಮಿಸಿರುವ ಗುಂಡಿಗಳನ್ನು ರಾತ್ರೋರಾತ್ರಿ ಮುಚ್ಚಿ ವ್ಯವಸಾಯ ಮಾಡಿಕೊಂಡಿದ್ದಾರೆ.ಸದ್ಯ ಇದರ ಸಲುವಾಗಿಯೇ ಸಾಕಷ್ಟು ಬಾರೀ ಸಣ್ಣಸಣ್ಣ ಪ್ರತಿಭಟನೆಗಳು ನಡೆದಿವೆ.ಆದರೆ ತಾಲೂಕು ಅರಣ್ಯಾಧಿಕಾರಿ ಈ‌ ಸ್ಥಳದಲ್ಲಿ ಉಳುಮೆ ಮಾಡಬಾರದೆಂದು ಖಡಕ್ ಎಚ್ಚರಿಕೆಯನ್ನು ಕೊಟ್ಟರು ಎಚ್ಚೆತ್ತುಕೊಳ್ಳದ ರೈತರು ಅಧಿಕಾರಿಗಳಿಗೆ ತೊಂದರೆಯನ್ನು ಕೊಡಲು ಮುಂದಾಗಿದ್ದಾರೆ. ಸದ್ಯ ಇದರ ಸಲುವಾಗಿಯೇ ಇಂದು ಪೊಲೀಸ್ ಹಿರಿಯ ಅಧಿಕಾರಿಗಳು,ತಾಲೂಕಿನ ದಂಡಾಧಿಕಾರಿಗಳು ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ಗಿಡಗಳನ್ನು ನೆಡಲು ಮುಂದಾಗಿದ್ದಾರೆ.

ಇನ್ನೂ ರೈತರ ಪರವಾಗಿ ನಿಂತ ರೈತ ಸಂಘ ಹಾಗೂ ಹಸಿರು ಸೇನೆ ರೈತರು ಬೆಳೆದಿರುವ ಬೆಳೆಯನ್ನು ಕಟಾವು ಮಾಡುವವರಿಗೂ ರೈತರಿಗೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡ ನಂತರ ಅಧಿಕಾರಿಗಳು ಒಪ್ಪಿ ಅನುಮತಿ ಯನ್ನು ನೀಡಿದ್ದಾರೆ.

Conclusion:ಅರಣ್ಯ ಅಧಿಕಾರಿಗಳು..ರವಿಶಂಕರ್ ಡಿಎಫ್ಓ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.