ETV Bharat / state

ಶಿಡ್ಲಘಟ್ಟದ ಬಳಿ ಅಪಘಾತ: ಜನ್ಮ ದಿನದಂದೇ ವಕೀಲ ಸಾವು - senior lawyer dead

ಅಪಘಾತವಾದ ಸ್ಥಳದಲ್ಲಿ ಒಂದು ಗಂಟೆಗೂ ಅಧಿಕ ಸಮಯ ಮಳೆಯಲ್ಲಿಯೇ ಮೃತದೇಹ ನೆನೆಯುವಂತಾಗಿದ್ದು, ಸಾರ್ವಜನಿಕರು ನೋಡಿಯು ನೋಡದ ಹಾಗೆ ಅಮಾನವೀಯತೆ ತೋರಿದ್ದಾರೆ.

ಕುಟುಂಬಸ್ಥರ ಆಕ್ರಂದನ
author img

By

Published : Oct 7, 2019, 4:22 PM IST

ಚಿಕ್ಕಬಳ್ಳಾಪುರ: 46ನೇ ವರ್ಷದ ಹುಟ್ಟುಹಬ್ಬವನ್ನು ತನ್ನ ಕುಟುಂಬದೊಂದಿಗೆ ಆಚರಿಸಿಕೊಂಡು ಊರಿಗೆ ತೆರಳುವ ವೇಳೆ ದ್ವಿಚಕ್ರ ವಾಹನ ಹಾಗೂ ಟಾಟಾ ಏಸ್ ನಡುವೆ ಡಿಕ್ಕಿಯಾದ ಪರಿಣಾಮ ಹಿರಿಯ ವಕೀಲ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಂಭ್ರಮದ ಮನೆಯಲ್ಲಿ ಈಗ ದುಃಖ ಮಡುಗಟ್ಟಿದೆ.

ಈ ಘಟನೆ ಶಿಡ್ಲಘಟ್ಟ ವ್ಯಾಪ್ತಿಯಲ್ಲಿ ನಡೆದಿದ್ದು, ಬಿ.ನೌಶಾದ್ (46) ಮೃತ ದುರ್ದೈವಿ.

ಕುಟುಂಬಸ್ಥರ ಆಕ್ರಂದನ

ದಸರಾ ರಜೆ ಹಿನ್ನೆಲೆ ಬೆಳಿಗ್ಗೆ ಆಂಧ್ರ ಪ್ರದೇಶದ ಪುಂಗನೂರಿಗೆ ಬೈಕ್​​ನಲ್ಲಿ ತೆರಳುತ್ತಿದ್ದಾಗ ಶಿಡ್ಲಘಟ್ಟ ದಾರಿಯ ಹುಣಸೇನಹಳ್ಳಿ ತಿಣಕಲ್ಲು ಗ್ರಾಮದಲ್ಲಿ ಅಪಘಾತ ಸಂಭವಿಸಿದೆ. ಆಗ ಮಳೆ ಬರುತ್ತಿತ್ತು. ಒಂದು ಗಂಟೆಗೂ ಅಧಿಕ ಸಮಯ ಮಳೆಯಲ್ಲಿಯೇ ಮೃತದೇಹ ನೆನೆಯುವಂತಾಗಿದ್ದು, ಸಾರ್ವಜನಿಕರು ನೋಡಿಯು ನೋಡದ ಹಾಗೆ ಅಮಾನವೀಯತೆ ತೋರಿದ್ದಾರೆ.

ನೌಶಾದ್​ 1982ರಿಂದ ವಕೀಲ ವೃತ್ತಿ ನಿರ್ವಹಿಸುತ್ತಿದ್ದರು. ಪತ್ನಿ ಎಸ್.ಕೆ.ತಾಜುನ್ನೀಸಾ ನಿವೃತ್ತ ಶಿಶು ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ. ಇಬ್ಬರು ಹೆಣ್ಣುಮಕ್ಕಳಲ್ಲಿ ಹಿರಿಯ ಮಗಳು ಬಿ.ನೌತಾಜ್ ಸಂರಕ್ಷಣಾಧಿಕಾರಿ, ಎರಡನೇ ಮಗಳು ಎನ್.ಚಾಂದಿನಿ ಇತ್ತೀಚೆಗಷ್ಟೇ ನ್ಯಾಯಾಧೀಶೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

Intro:Body:46 ನೇ ವರ್ಷದ ಹುಟ್ಟು ಹಬ್ಬವನ್ನು ಕುಟುಂಬದವರ ಜೋತೆ ಆಚರಿಸಿಕೊಂಡು ಸ್ವಂತ ಊರಿಗೆ ತೆರಳುವ ವೇಳೆ ದ್ವಿಚಕ್ರವಾಹನ ಹಾಗೂ ಟಾಟಾ ಏಸ್ ನಡುವೆ ಡಿಕ್ಕಿಯಾದ ಪರಿಣಾಮ ಹಿರಿಯ ವಕೀಲ ಹಾಗೂ ನೋಟರಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿಡ್ಲಘಟ್ಟ ವ್ಯಾಪ್ತಿಯಲ್ಲಿ ನಡೆದಿದೆ.

ಬಿನೌಷಾದ್ (46) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.

ಚಿಂತಾಮಣಿ ಹಾಗೂ ಶಿಡ್ಲಘಟ್ಟ ದಾರಿಯ ಹುಣಸೇನಗಳ್ಳಿ
ತಿಣಕಲ್ಲು ಗ್ರಾಮದ ಮಧ್ಯೆ ಟಾಟಾ ಏಸ್ ಮತ್ತು ವೋಂಡ ಆಕ್ಟೀವಾ ನಡುವೆ ಮುಖಿ ಡಿಕ್ಕಿಯಾಗಿ ಸ್ಥಳದಲ್ಲೆ ಸಾವಿಗೀಡಾಗಿದಾಗಿ ತಿಳಿದು ಬಂದಿದೆ.

ದಸರಾ ರಜೆ ಇದ್ದ ಕಾರಣ ಇಂದು ಬೆಳಗ್ಗೆ ಸ್ವಂತ ಊರಾದ ಆಂದ್ರ ಪ್ರದೇಶದ ಪುಂಗನೂರಿಗೆ ದ್ವೀಚಕ್ರವಾಹನದಲ್ಲಿ ತೆರಳಿದ್ದು ದಾರಿ ಮಧ್ಯದಲ್ಲಿಯೇ ಅಪಘಾತಕ್ಕೀಡಾಗಿದ್ದಾರೆ.

ಜಿನಗುತ್ತಿದ್ದ ಮಳೆಯಲ್ಲಿ ಅಪಘಾತ ಸಂಭವಿಸಿದ್ದು ಒಂದು ಗಂಟೆಗೂ ಅಧಿಕ ಸಮಯ ಮಳೆಯಲ್ಲಿ ಮೃತ ದೇಹ ನೆನೆಯುವಂತಾಗಿದ್ದು ಸಾರ್ವಜನಿಕರು ನೋಡಿನೋಡದ ಹಾಗೇ ಮೂಖಪ್ರೇಕ್ಷರಂತೆ ನೋಡಿ ಸುಮ್ಮನಾಗಿದ್ದಾರೆ.

ಇವರು 1982 ರಿಂದ ವಕೀಲ ವೃತ್ತಿ ನಿರ್ವಹಿಸುತ್ತಿದ್ದು ಇವರ ಪತ್ನಿ ಎಸ್.ಕೆ.ತಾಜುನ್ನೀಸಾ ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬರು ಹಿರಿಯ ಮಗಳು ಬಿ.ನೌತಾಜ್ ಸಂರಕ್ಷಣಾಧಿಕಾರಿ
ಎರಡನೇ ಮಗಳು ಎನ್.ಚಾಂದಿನಿ ಇತ್ತಿಚ್ಚೇಗಷ್ಟೇ ನ್ಯಾಯಾಧೀಶೆಯಾಗಿ ಪ್ರಮಾಣ ಸ್ವೀಕರಿಸಿದ್ದು ಸಂಭ್ರಮದಿಂದ ಇದ್ದ ಮನೆ ಈಗ ದುಖಃದಲ್ಲಿ ಮುಳಗಿದೆ.

ಇನ್ನೂ ಈ ಪ್ರಕರಣ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.