ಚಿಕ್ಕಬಳ್ಳಾಪುರ: ಗ್ರಾಮದಲ್ಲಿ ಗುಂಪು ಕಟ್ಟಿಕೊಂಡು ಮಧ್ಯರಾತ್ರಿಯವರೆಗೂ ಹರಟೆ ಹೊಡೆಯುತ್ತಿದ್ದುದಕ್ಕೆ ಬುದ್ಧಿವಾದ ಹೇಳಿದ ಗ್ರಾಮಸ್ಥರಿಗೆ ಯುವಕ ಮಚ್ಚು ಹಿಡಿದು ದರ್ಪ ತೋರಿಸಿದ್ದಾನೆ. ಈ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊರೊನಾ ರೋಗ ಹರಡುವ ಭೀತಿಯಿದ್ದು ಜನರು ರಸ್ತೆಯಲ್ಲಿ ಗುಂಪು ಸೇರದೆ, ಮನೆಯಲ್ಲಿಯೇ ಇರಬೇಕು ಎಂದು ಹಿತ್ತಲಹಳ್ಳಿ ಗ್ರಾಮದ ಜಲಗಾರ ಗಂಗಾ ರೆಡ್ಡಿ ಎಂಬವರು ಯುವಕರಿಗೆ ಬುದ್ಧಿವಾದ ಹೇಳುತ್ತಿದ್ದರು. ಈ ಸಂದರ್ಭದಲ್ಲಿ ಯುವಕ ರೊಚ್ಚಿಗೆದ್ದು ಮಚ್ಚು ಹಿಡಿದು ಅವಾಚ್ಯ ಶಬ್ಧಗಳಿಂದ ನಿಂದಿಸೋಕೆ ಶುರು ಮಾಡಿದ್ದಾನೆ.