ETV Bharat / state

ಆಸ್ಪತ್ರೆಗೆ ಹೋಗುವಾಗ ಮಾರ್ಗಮಧ್ಯೆ ಆ್ಯಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮ

ಗ್ರಾಮದಿಂದ ತಾಲ್ಲೂಕಾಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯದಲ್ಲಿ ಆ್ಯಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಬಾಗೇಪಲ್ಲಿ ತಾಲ್ಲೂಕಿನಲ್ಲಿ ನಡೆದಿದೆ.

A woman who gave birth to a baby in an ambulance
ಆ್ಯಂಬುಲೆನ್ಸ್ ನಲ್ಲೆ ಮಗುವಿಗೆ ಜನ್ಮ ನಿಡಿದ ಮಹಿಳೆ
author img

By

Published : Apr 29, 2020, 3:29 PM IST

ಬಾಗೇಪಲ್ಲಿ: ತಾಲ್ಲೂಕಿನ ಗೂಳೂರು ಹೋಬಳಿಯ ಗುಂಡ್ಲಪಲ್ಲಿ ಗ್ರಾಮದ ವನಿತ ಎಂಬ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ನಡುವೆ ಆ್ಯಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ.

ನಸುಕಿನ ಜಾವ ಹೆರಿಗೆ ನೋವು ಶುರುವಾಗಿದ್ದು 108 ಆ್ಯಂಬುಲೆನ್ಸ್ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಕರೆಗೆ ತಕ್ಷಣ ಸ್ಪಂದಿಸಿದ ಆ್ಯಂಬುಲೆನ್ಸ್ ನವರು ಗ್ರಾಮದಿಂದ ತಾಲ್ಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಪೋತೇಪಲ್ಲಿ ಸಮೀಪ ಹೆರಿಗೆಯಾಗಿದೆ.

ಈ ಸಂದರ್ಭದಲ್ಲಿ ದೇವಿಕುಂಟೆಯ ಡಿ.ವಿ.ಮುರಳಿ, ಆಶಾ ಕಾರ್ಯಕರ್ತೆ ಅನಿತಾ, ಆ್ಯಂಬುಲೆನ್ಸ್ ಸಿಬ್ಬಂದಿ ಸೀನಪ್ಪ ಸಹಜ ಹೆರಿಗೆ ಮಾಡಿಸಿದ್ದಾರೆ. ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ಬಾಣಂತಿ ಮತ್ತು ಗಂಡು ಮಗು ಆರೋಗ್ಯವಾಗಿದೆ. ತಾಯಿ, ಮಗು ಆರೋಗ್ಯ ವಾಗಿದ್ದು ಪಟ್ಟಣದ ಆರೋಗ್ಯ ಕೇಂದ್ರದಲ್ಲಿ ಸೇರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.