ETV Bharat / state

ಇಟಲಿ ಬ್ಯೂಟಿ ಮದುವೆ ಆಗಲು ಹೋಗಿ ಹಳ್ಳಕ್ಕೆ ಬಿದ್ದ ಹಳ್ಳಿ ಹೈದ... ಆಕೆ ದೋಚಿದ ಹಣವೆಷ್ಟು ಅಂತಾ ಗೊತ್ತಾದ್ರೇ...!!?

ಬ್ಯೂಟಿಯ ಫೋಟೋ ನೋಡಿ ಆಕಾಶಕ್ಕೆ ಮೂರೇ ಗೇಣು ಅಂತ ಹಾರಾಡಿದ ಮುನಿರಾಜು, ಆಕೆ ಜೊತೆ ಚಾಟಿಂಗ್​ಗೆ ಇಳಿದಿದ್ದಾನೆ. ಅತ್ತ ಕಡೆಯಿಂದ ವಾಟ್ಸ್​ ಆ್ಯಪ್​​ ಮುಖಾಂತರ ಕರೆ ಮಾಡಿದ ಆಕೆ, ನಾನು ಭಾರತದವಳು ಸದ್ಯ ಇಟಲಿಯಲ್ಲಿ ಪೆಪ್ಸಿಕೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಮನೆಯವರಿಗೆಲ್ಲ ನಿಮ್ಮ ಪ್ರೊಫೈಲ್ ತೋರಿಸಿದ್ದೇನೆ ಭಾರತಕ್ಕೆ ಬಂದು‌ ನಿಮ್ಮನ್ನ ಮದುವೆಯಾಗ್ತೀನಿ ಎಂದು ಮುನಿರಾಜುವಿಗೆ ಹೇಳಿದ್ದಾಳೆ.

ಇಟಲಿ ಬ್ಯೂಟಿ ಮದುವೆ ಆಗಲೋಗಿ ಹಳ್ಳಕ್ಕೆ ಬಿದ್ದ ಹಳ್ಳಿ ಹೈದ
author img

By

Published : Sep 20, 2019, 11:46 AM IST

ಚಿಕ್ಕಬಳ್ಳಾಪುರ: ಮ್ಯಾಟ್ರಿಮೋನಿಯಲ್ಲಿ ವಧು - ವರ ಹುಡುಕಾಟದಲ್ಲಿದ್ದಾರಾ ....? ಹಾಗಾದ್ರೆ ಈ ಸ್ಟೋರಿ‌ ನೀವು ನೋಡಲೇಬೇಕು. ಯಾಕೆ ಅಂತೀರಾ, ಇಟಲಿ ಬ್ಯೂಟಿಯ ಮದುವೆ ಆಗಲು ಹೊರಟ ಭಾರತದ ಹಳ್ಳಿ ಹೈದನೊಬ್ಬ ಲಕ್ಷ ಲಕ್ಷ ಪಂಗನಾಮ ಹಾಕಿಸಿಕೊಂಡು ಸಾಲಗಾರನಾಗಿ ಈಗ ಪೊಲೀಸ್ ಠಾಣೆ ಅಲೆದಾಡುವಂತಾಗಿದೆ.

ವಿಚ್ಚೇಧಿತನಾದ ಚಿಕ್ಕಬಳ್ಳಾಪುರ ನಗರದ ನಿವಾಸಿ ಮುನಿರಾಜು ಎಂಬಾತ ಮದುವೆ ಆಗಬೇಕು ಅಂತ ಕನ್ನಡ ಮ್ಯಾಟ್ರಿಮೋನಿಯಲ್ಲಿ ತನ್ನ ಪ್ರೊಫೈಲ್ ಕ್ರಿಯೇಟ್ ಮಾಡಿ, ವಧುವಿನ ಹುಡುಕಾಟದಲ್ಲಿ ತೊಡಗಿದ್ದ. ಅದೊಂದು ದಿನ ಇಂಟರ್ ನ್ಯಾಷನಲ್‌ ನಂಬರ್​ನಿಂದ ವಾಟ್ಸ್​ಆ್ಯಪ್​ ಮುಖಾಂತರ ಚಾಟ್ ಮಾಡಿದ ಬ್ಯೂಟಿ ಒಬ್ಬಳು ನಾನು ಮ್ಯಾಟ್ರಿಮೋನಿಯಲ್ಲಿ ನಿಮ್ಮ ಪ್ರೊಪೈಲ್​​​ ನೋಡಿದೆ. ನಿಮ್ಮನ್ನ ಮದುವೆ ಆಗಬೇಕು ಅಂತಿದ್ದೀನಿ ಅಂದಿದ್ದಾಳೆ.

ಇಟಲಿ ಬ್ಯೂಟಿ ಮದುವೆ ಆಗಲೋಗಿ ಹಳ್ಳಕ್ಕೆ ಬಿದ್ದ ಹಳ್ಳಿ ಹೈದ

ಬ್ಯೂಟಿಯ ಫೋಟೋ ನೋಡಿ ಆಕಾಶಕ್ಕೆ ಮೂರೇ ಗೇಣು ಅಂತ ಹಾರಾಡಿದ ಮುನಿರಾಜು, ಆಕೆ ಜೊತೆ ಚಾಟಿಂಗ್​ಗೆ ಇಳಿದಿದ್ದಾನೆ. ಅತ್ತ ಕಡೆಯಿಂದ ವಾಟ್ಸ್​ಆ್ಯಪ್​​ ​ ಮುಖಾಂತರ ಕರೆ ಮಾಡಿದ ಆಕೆ, ನಾನು ಭಾರತದವಳು ಸದ್ಯ ಇಟಲಿಯಲ್ಲಿ ಪೆಪ್ಸಿಕೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಮನೆಯವರಿಗೆಲ್ಲ ನಿಮ್ಮ ಪ್ರೊಪೈಲ್​​ ತೋರಿಸಿದ್ದೇನೆ ಭಾರತಕ್ಕೆ ಬಂದು‌ ನಿಮ್ಮನ್ನ ಮದುವೆಯಾಗ್ತೀನಿ ಎಂದು ಮುನಿರಾಜುವಿಗೆ ಹೇಳಿದ್ದಾಳೆ.

ಮೊದಲೆರೆಡು ತಿಂಗಳು ಇದೇ ರೀತಿ ಚಾಟಿಂಗ್, ಇಂಟರ್ನೆಟ್ ಕಾಲ್ ಮಾಡಿದ ಆಕೆ, ನಾನು ಇಂಡಿಯಾಗೆ ಬರ್ತೀನಿ ಇಟಲಿಯಿಂದ ಟಿಕೆಟ್ ಬುಕ್ ಮಾಡಬೇಕು ಹಣ ಕಳಿಸು ಅಂತ ಟಿಕೆಟ್ ಮಾಡೋಕೆ‌ ಹಣ ಪಡೆದುಕೊಂಡಿದ್ದಾಳೆ. ಇಟಲಿಯಿಂದ ದೆಹಲಿಗೆ ಬಂದಿದ್ದೀನಿ ನನ್ನ ಬಳಿ ಇಟಲಿಯ ಒಂದೂವರೆ ಕೋಟಿ ಕರೆನ್ಸಿ ಇದೆ. ಏರ್ಪೋರ್ಟ್​​​ನಲ್ಲಿ ಕಸ್ಟಮ್ಸ್ ವರು ಹಿಡಿದುಕೊಂಡಿದ್ದಾರೆ. ಅವರಿಗೆ ಟ್ಯಾಕ್ಸ್ ಪೇ ಮಾಡಿದ್ರೇ ಎಲ್ಲಾ ಹಣ ವಾಪಾಸ್ ಮಾಡ್ತಾರೆ‌. ಆ ಹಣ ನಿನಗೆ ಕೊಡ್ತೀನಿ ಅಂತ ಹೇಳಿ ಹಣ ಹಾಕಿಸಿಕೊಂಡಿದ್ದಾಳೆ. ಹೀಗೆ ಒಂದಲ್ಲ ಒಂದು ನೆಪ ಹೇಳಿ ಮುನಿರಾಜು ಬಳಿ ಬರೋಬ್ಬರಿ 27 ಲಕ್ಷ ರೂಪಾಯಿ ಹಣ ಪಡೆದು ಕೊನೆಗೆ ಫೋನ್ ಸ್ವಿಚ್ಡ್​​ ಆಫ್ ಮಾಡಿ ಈಗ ಸುಮ್ಮನಾಗಿದ್ದಾಳೆ.

ಫೋನ್ ಸ್ವಿಚ್ಡ್​​ ಆಫ್ ಆದರಿಂದ ಅನುಮಾನಗೊಂಡ‌ ಮುನಿರಾಜು, ಮೊದಲು ಬ್ಯಾಂಕಿಗೆ ಹೋಗಿ ಹಣ ಹಾಕಿದ ಖಾತೆಗಳನ್ನು ಪರೀಶೀಲನೆ ಮಾಡಿಸಿದ್ದಾನೆ. ಆಗ ಗೊತ್ತಾಗಿದ್ದು ಅವೆಲ್ಲವೂ ಫೇಕ್ ಅಕೌಂಟ್​​ ಎಂದು. ಹೀಗಾಗಿ ಸುಂದರಿ ಸಿಗ್ತಾಳೆ ಮದುವೆ ಅಗೋಣ ಅಂತ ಒಂದಲ್ಲ ಎರಡಲ್ಲ 30 ಲಕ್ಷ ಸಾಲ ಮಾಡಿ ನೀಡಿದ ಹಣ ಈಗ ಕೆರೆಗೆ ಚೆಲ್ಲಿದಂತಾಗಿದೆ. ಈ ಹಿನ್ನೆಲೆ ಮೋಸಹೋದ ಮುನಿರಾಜು ಚಿಕ್ಕಬಳ್ಳಾಪುರ ಜಿಲ್ಲಾ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾನೆ.

Intro:ಆಂಕರ್: ಮ್ಯಾಟ್ರಿಮನಿಯಲ್ ನಲ್ಲಿ ವಧು-ವರ ಹುಡುಕಾಟದಲ್ಲಿದ್ದರಾ....? ಹಾಗಾದ್ರೆ ಈ ಸ್ಟೋರಿ‌ ನೀವು ನೋಡಲೇಬೇಕು. ಅರೇ ಯಾಕೆ ಅಂದ್ರಾ ಇಟಲಿ ಬ್ಯೂಟಿಯ ಮದುವೆ ಆಗಲು ಹೊರಟ ಭಾರತದ ಹಳ್ಳಿ ಹೈದನೊರ್ವ ಲಕ್ಷ ಲಕ್ಷ ಪಂಗನಾಮ ಹಾಕಿಸಿಕೊಂಡು ಸಾಲಗಾರನಾಗಿ ಈಗ ಪೊಲೀಸ್ ಠಾಣೆ ಅಲೆದಾಡುವಂತಾಗಿದೆ...ಈ ಕುರಿತ ಒಂದು ವರದಿ ಇಲ್ಲಿದೆ‌‌ ನೋಡಿ..Body:ಮ್ಯಾಟ್ರಿಮನಿಯಲ್ ನಲ್ಲಿ ವಧು ಹುಡುಕೋಕೆ ಮುಂಚೆ ಇಲ್ನೋಡಿ..!!

ಮದುವೆ ಆಗೋಣ ಅಂತ ಲಕ್ಷ ‌ಲಕ್ಷ ಪೀಕಿದ್ಲು ಇಟಲಿ ಸುಂದರಿ..!!

ಬಡಪಾಯಿ‌ ಬಳಿ ಮೂವತ್ತು ಲಕ್ಷ ಪೀಕಿದ ಖತರ್ನಾಕ್ ಸುಂದರಿ..!!

ಸುಂದರಿಯ ಚಾಟಿಂಗ್ ಚೀಟಿಂಗ್ ಗೆ ಬಲಿಯಾದ ಅಮಾಯಕ.

ಇಟಲಿ ಬ್ಯೂಟಿ ಮೋಸದಾಟಕ್ಕೆ ಸಾಲಗಾರನಾದ ಬಡಪಾಯಿ.

ಲುಕ್..

ವಿಷ್ಯುಯುಲ್ಸ್ ಫ್ಲೋ..

ವಾ.ಒ-೧.
ಹೀಗೆ....ಮದುವೆ ಆಗೋಕೆ ಹೋದ ಹಳ್ಳಿ ಹೈದ ಈಗ ಪೊಲೀಸ್ ಠಾಣೆಗೆ ಅಲೆದಾಡ್ತಿರೋದು ಚಿಕ್ಕಬಳ್ಳಾಪುರ ದಲ್ಲಿ. ಹೌದು ವಿಚ್ಚೇಧಿತನಾದ ಚಿಕ್ಕಬಳ್ಳಾಪುರ ನಗರದ ನಿವಾಸಿ ಮುನಿರಾಜು ಎಂಬಾತ ಮದುವೆ ಆಗಬೇಕು ಅಂತ ಕನ್ನಡ ಮ್ಯಾಟ್ರಿಮೋನಿಯಲ್ ನಲ್ಲಿ ತನ್ನ ಫ್ರೋಫೈಲ್ ಕ್ರೀಯೇಟ್ ಮಾಡಿ ವಧುವಿನ ಹುಡಕಾಟದಲ್ಲಿ ತೊಡಗಿದ್ದ.ಅದೊಂದು ದಿನ ಇಂಟರ್ ನ್ಯಾಷನಲ್‌ ನಂಬರ್ ನಿಂದ ವಾಟ್ಸಾಫ್ ಮುಖಾಂತರ ಚಾಟ್ ಮಾಡಿದ ಬ್ಯೂಟಿ ಯೊರ್ವಳು ನಾನು ಮ್ಯಾಟ್ರಿಮೋನಿಯಲ್‌ನಲ್ಲಿ ನಿಮ್ಮ ಪ್ರೋಫೈಲ್ ನೋಡಿದೆ. ನಿಮ್ಮನ್ನ ಮದುವೆ ಆಗಬೇಕು ಅಂತಿದ್ದೀನಿ ಅಂದಿದ್ದಾಳೆ. ಅಷ್ಟೇ ಬ್ಯೂಟಿಯ ಪೋಟೋ ನೋಡಿ ಆಕಾಶಕ್ಕೆ ಮೂರೇ ಗೇಣು ಅಂತ ಹಾರಾಡಿದ ಮುನಿರಾಜು ಬ್ಯೂಟಿ ಜೊತೆ ಚಾಟಿಂಗ್ ಗೆ ಇಳಿದಿದ್ದಾನೆ. ಅತ್ತ ಕಡೆಯಿಂದ ವಾಟ್ಸಾಫ್ ಮುಖಾಂತರ ಕರೆ ಮಾಡಿದ ಬ್ಯೂಟಿ..ನಾನು ಭಾರತದವಳು ಸದ್ಯ ಇಟಲಿಯಲ್ಲಿ ಪೆಪ್ಸಿಕೋ ಕಂಪನಿ ಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಮನೆಯವರಿಗೆಲ್ಲಾ ನಿಮ್ಮ ಪ್ರೋಫೈಲ್ ತೋರಿಸಿದ್ದೇನೆ ಭಾರತಕ್ಕೆ ಬಂದು‌ ನಿಮ್ಮನ್ನ ಮದುವೆಯಾಗ್ತೀನಿ ಅಂದಿದ್ದಾಳೆ. ಮೊದೆಲೆರೆಡು ತಿಂಗಳು ಇದೇ ರೀತಿ ಚಾಟಿಂಗ್, ಇಂಟರ್ನೆಟ್ ಕಾಲ್ ಮಾಡಿದ ಬ್ಯೂಟಿ ..ನಾನು ಇಂಡಿಯಾಗೆ ಬರ್ತೀನಿ ಇಟಲಿಯಿಂದ ಟಿಕೆಟ್ ಬುಕ್ ಮಾಡಬೇಕು ಹಣ ಕಳಿಸು ಅಂತ ಟಿಕೆಟ್ ಮಾಡೋಕೆ‌ ಹಣ ಪಡೆದುಕೊಂಡಿದ್ದಾಳೆ. ಇಟಲಿಯಿಂದ ದೆಹಲಿಗೆ ಬಂದಿದ್ದೀನಿ ನನ್ನ ಬಳಿ ಇಟಲಿಯ ಒಂದೂವರೆ ಕೋಟಿ ಕರೆನ್ಸಿ ಇದೆ..ಏರ್ಪೋರ್ಟ್ ಲ್ಲಿ ಕಸ್ಟಮ್ಸ್ ವರು ಹಿಡಿದುಕೊಂಡಿದ್ದಾರೆ. ಅವರಿಗೆ ಟ್ಯಾಕ್ಸ್ ಪೇ ಮಾಡಿದ್ರೇ ಎಲ್ಲಾ ಹಣ ವಾಪಾಸ್ ಮಾಡ್ತಾರೆ‌ ಆ ಹಣ ನಿನಗೆ ಕೊಡ್ತೀನಿ ಅಂತ ಹೇಳಿ ಹಣ ಹಾಕಿಸಿಕೊಂಡಿದ್ದಾಳೆ. ಹೀಗೆ ಒಂದಲ್ಲ ಒಂದು ನೆಪ ಹೇಳಿ ಮುನಿರಾಜು ಬಳಿ ಬರೋಬ್ಬರಿ ೨೭ ಲಕ್ಷ ರೂಪಾಯಿ ಹಣ ಪಡೆದ ಬ್ಯೂಟಿ ಕೊನೆಗೆ ಪೋನ್ ಸ್ವಿಚ್ ಆಫ್ ಮಾಡಿ ಸುಮ್ಮನಾಗಿದ್ದಾಳೆ.

ಬೈಟ್..‌ಮುನಿರಾಜು...ಮೋಸ ಹೋದವ.

ವಾ.ಒ-೨ ಪೋನ್ ಸ್ವಿಚ್ ಅಫ್ ಆದರಿಂದ ಅನುಮಾನಗೊಂಡ‌ ಮುನಿರಾಜು ಮೊದಲು ಬ್ಯಾಂಕಿಗೆ ಹೋಗಿ ಹಣ ಹಾಕಿದ ಖಾತೆಗಳನ್ನು ಪರೀಶೀಲನೆ ಮಾಡಿಸಿದ್ದಾನೆ. ಆಗ ಗೊತ್ತಾಗಿದ್ದು ಅವೆಲ್ಲ‌ವೂ ಫೇಕ್ ಅಕೌಂಟ್ಸ್ ಅಂತ. ಹೀಗಾಗಿ ಸುಂದರಿ ಸಿಗ್ತಾಳೆ ಮದುವೆ ಅಗೋಣ ಅಂತ ಒಂದಲ್ಲ ಎರಡಲ್ಲ ಅಂತ ಸಾಲ ಸೋಲ‌ ಮಾಡಿ ಸರಿಸುಮಾರು ೩೦ ಲಕ್ಷ ಸುರಿದ ಮುನಿರಾಜು ಈಗ ಚಿಕ್ಕಬಳ್ಳಾಪುರ ಜಿಲ್ಲಾ ಸೈಬರ್ ಕ್ರೈಂ‌ ಪೊಲೀಸರ ಮೊರೆ ಹೋಗಿದ್ದಾನೆ.

ಬೈಟ್: ಸಂತೋಷ್ ಬಾಬು ಎಸ್ಪಿ ಚಿಕ್ಕಬಳ್ಳಾಪುರ.

ವಾ.ಒ-೩

ಓಟ್ನಲ್ಲಿ‌ ಇಟಲಿ ಸುಂದರಿಯ ಸೌಂದರ್ಯಕ್ಕೆ ಮರುಳಾದ ಹಳ್ಳಿ ಹೈದ ಈಗ ಸಾಲದ ಸುಳಿಗೆ ಸಿಲುಕಿದ್ದು... ಸ್ವಾಮಿ ನನ್ನ ದುಡ್ಡು ವಾಪಾಸ್ ಕೊಡಿಸಿ ಅಂತ ಪೊಲೀಸರ ಬಳಿ ಅಳಲು ತೋಡಿಕೊಳ್ತಿದ್ದಾ‌ನೆ. ಅದಕ್ಕೆ ಮ್ಯಾಟ್ರಿಮನಿಯಲ್ ನಲ್ಲಿ ಬ್ಯೂಟಿ ಸಿಕ್ದ್ಲು ಅಂತ ಮಾರು ಹೋದ್ರೆ ಮೋಸ ಹೋಗಬಹುದು ಯಾವುದಕ್ಕೂ ನೀವು ಹುಷಾರ್..!Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.