ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗ್ರಾಮೀಣ ಭಾಗದ ಹಿಂಗಾರು ಬೆಳೆಗಳಾದ ಜೋಳ, ಹುರಳಿ. ರಾಗಿ ಇನ್ನಿತರ ಬೆಳೆಗಳನ್ನು ಕಟಾವು ಮಾಡಿರುವ ರೈತರು ಈ ಬೆಳೆಗಳ ಒಕ್ಕಣೆ ಮಾಡಲು ಡಾಂಬರು ರಸ್ತೆ ಕಣಗಳಾಗಿ ಮಾಡಿ ವಾಹನ ಸಂಚಾರಕ್ಕೆ ತುಂಬಾ ಅಡ್ಡಿಯಾಗಿದೆ
ಈ ಹಿಂದೆ ರೈತರು ತಮ್ಮ ಜಮೀನುಗಳಲ್ಲಿ ಬೆಳದಂತಹ ಬೆಳೆಗಳು ಕಟಾವು ಮಾಡಿದ ಬಳಿಕ ಒಕ್ಕಣೆ ಮಾಡಲು ಹೊಲದಲ್ಲಿ ದನಕರುಗಳ ಸಗಣಿ ತಂದು ಸಾರಿಸಿ ಕಣಗಳನ್ನು ಅಚ್ಚು ಕಟ್ಟಾಗಿ ಮಾಡುತ್ತಿದ್ದರು.
ಆದರೀಗ ಜನರು ಬೆಳದಂತಹ ರೈತರು ಕಣ ಮಾಡುವಲ್ಲಿ ಆಸಕ್ತಿ ತೋರದೆ ರಸ್ತೆಯಲ್ಲಿ ಹುಲ್ಲು ಹಾಕಿ ಒಕ್ಕಣೆ ಮಾಡುತ್ತಿರುವುದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತಿವೆ.
ರಸ್ತೆಯಲ್ಲಿ ಹುಲ್ಲು ನುಣುಪಾದ ಸಮಯದಲ್ಲಿ ದ್ವಿಚಕ್ರ ವಾಹನ ಸವಾರರು ವೇಗವಾಗಿ ಸಂಚರಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಬಹುದು.