ಚಿಕ್ಕಬಳ್ಳಾಪುರ : ಭಿಕ್ಷುಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ.
ನಗರಸಭೆಯ ಮೀನು-ಮಾಂಸ ಮಾರಾಟ ಮಳಿಗೆಗೆಳ ಸಂಕೀರ್ಣದ ಬಳಿ 40 ವರ್ಷದ ಭಿಕ್ಷುಕಿ ಮಲಗಿದ್ದ ವೇಳೆ ಮಾರುಕಟ್ಟೆ ಸಂಕೀರ್ಣದಲ್ಲಿ (Market complex) ವ್ಯಾಪಾರ ಬಂಡಿಯನ್ನು ಇಟ್ಟುಕೊಂಡು ಚಕ್ಕೆಲವಂಗ ಮಾರಾಟ ಮಾಡುತ್ತಿದ್ದ ಅಬ್ದುಲ್ಲಾ ಎಂಬಾತ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಸದ್ಯ ಆರೋಪಿಯ ಕೃತ್ಯಗಳು ಸಿಸಿ ಟಿವಿಯಲ್ಲಿ (CC TV) ಸೆರೆಯಾಗಿವೆ. ನಿದ್ರೆಯಲ್ಲಿದ್ದ ವೇಳೆ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಎಚ್ಚರಗೊಂಡ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಕ್ಕೆ, ಗಂಭೀರವಾಗಿ ಗಾಯಗೊಳಿಸಿ ಅತ್ಯಾಚಾರ (Rape) ಮಾಡಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಭಿಕ್ಷುಕಿ ಸಾವಿಗೀಡಾಗಿದ್ದಾಳೆ.
ಘಟನಾ ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ (SP Mithun kumar) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.