ಚಿಕ್ಕಬಳ್ಳಾಪುರ: ತಂದೆ ತಾಯಿಯನ್ನು ಕಳೆದುಕೊಂಡು ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ಯುವತಿಯನ್ನು ಎಲ್.ಎಲ್.ಬಿ ಪದವೀಧರ ಯುವಕನೋರ್ವ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ.
ಬಾಗೇಪಲ್ಲಿ ತಾಲೂಕಿನ ಪುಟ್ಟಪರ್ತಿ ನಿವಾಸಿಯಾಗಿದ್ದ ಮಮತಾ(23) ಎಂಬಾಕೆ ಬೆಂಗಳೂರಿನ B.M.S ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ ಮೂರು ವರ್ಷಗಳ ಹಿಂದೆ ಮಮತಾಳ ತಂದೆ ಅನಾರೋಗ್ಯದಿಂದ ಮೃತಪಟ್ಟಿದ್ದು, ತಾಯಿ ಒಂದು ವರ್ಷದ ಹಿಂದೆ ಮೃತಪಟ್ಟಿದ್ದಾರೆ. ಇದರಿಂದ ಮಮತಾಳ ಅಣ್ಣ ಮಾನಸಿಕ ಅಸ್ವಸ್ಥನಂತಾಗಿ ಹಾಸಿಗೆ ಹಿಡಿದುಬಿಟ್ಟ. ಇದರಿಂದ ನೊಂದ ಆಕೆ ಚಿಕ್ಕಬಳ್ಳಾಪುರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಳು.
ಮಮತಾಳ ಬಗ್ಗೆ ಆಕೆಯ ದೂರದ ಸಂಬಂಧಿಯೊಬ್ಬರು ಮಮತಾಳ ಕಥೆಯನ್ನು ತಮ್ಮ ಸಂಬಂಧಿ, ಬಾಗೇಪಲ್ಲಿ ತಾಲೂಕಿನ ಗುರಾಲದಿನ್ನೆ ನಿವಾಸಿ ಸೋಮಶೇಖರ್ (28) ರವರಿಗೆ ಈ ವಿಷಯ ತಿಳಿಸಿದ್ದಾರೆ. ಈ ಬಗ್ಗೆ ಸೋಮಶೇಖರ್ ನಾನು ಯುವತಿಗೆ ಬಾಳು ನೀಡುತ್ತೇನೆ ಎಂದು ಹೇಳಿದ್ದು, ಈ ಬಗ್ಗೆ ಪೋಷಕರನ್ನು ಒಪ್ಪಿಸಿ 3 ತಿಂಗಳಲ್ಲಿ ಮದುವೆಯಾಗಲು ನಿರ್ಧರಿಸಿದ್ದಾನೆ.
ಇದನ್ನೂ ಓದಿ :ಸೆಗಣಿ ಎರಚಾಡುತ್ತ ಹಬ್ಬ ಆಚರಣೆ.. ಗುಮ್ಮಟಾಪುರದಲ್ಲಿ ವಿಶೇಷ ಗೋರೆಹಬ್ಬ