ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳದಲ್ಲಿ ಕಾರ್ಯನಿರ್ವಹಿಸಿದ್ದ ಚಿತ್ರಾ ಎಂಬ ಹೆಸರಿನ ಶ್ವಾನವೊಂದು ಸಾವನ್ನಪ್ಪಿದ್ದು, ಸಿಬ್ಬಂದಿ ಕಣ್ಣೀರಿಟ್ಟ ಘಟನೆ ನಿನ್ನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಇತ್ತೀಚೆಗೆ ಬಿಡುಗಡೆಯಾಗಿ ಪ್ರೇಕ್ಷಕರನ್ನು ಕಣ್ಣೀರಿನ ಕಡಲಲ್ಲಿ ತೇಲಿಸಿದ್ದ ಚಾರ್ಲಿ 777 ಸಿನಿಮಾದ ಕಥೆ ನಿಜ ಜೀವನದಲ್ಲಿ ನಡೆದಿದೆ ಅಂದರೆ ನಂಬಲೇಬೇಕು.
ಚಿಕ್ಕಬಳ್ಳಾಪುರ ನಗರದಲ್ಲಿ ಅರ್ಜುನ್ ಎಂಬ ವ್ಯಕ್ತಿ ಸಾಕಿ ಬೆಳೆಸಿದ್ದ ಚಿತ್ರಾ ಅಲಿಯಾಸ್ ಚೀತು ಎಂಬ ಶ್ವಾನ, ಪೊಲೀಸ್ ಇಲಾಖೆಯಲ್ಲಿ ಬಾಂಬ್ ಸ್ಕ್ವಾಡ್ ಆಗಿ 2011 ಏಪ್ರಿಲ್ ಎರಡನೇ ತಾರೀಖಿನವರೆಗೂ ಕೆಲಸ ಮಾಡ್ತಿತ್ತು. ನಂತರ ಸ್ಲೀಲ್ ಎನ್ಲಾರ್ಜ್ಮೆಂಟ್ ಎಂಬ ಕಾಯಿಲೆಗೆ ತುತ್ತಾಗಿ ಪೊಲೀಸ್ ಇಲಾಖೆಯಿಂದ ನಿವೃತ್ತಿ ಹೊಂದಿದ್ದು, ತನ್ನ ಯಜಮಾನ ಅರ್ಜುನ್ ಆರೈಕೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶವಾಗಿದೆ.
ಮುದ್ದಾಗಿ ಸಾಕಿ ಬೆಳಸಿದ ಶ್ವಾನ ಸಾವನ್ನಪಿದ್ದರಿಂದ ಅರ್ಜುನ್ ಕುಟುಂಬಸ್ಥರು ಚಿತ್ರಾಗೆ ಕಣ್ಣೀರಿನ ವಿದಾಯ ಹೇಳಿದ್ದಾರೆ. ಸರ್ಕಾರಿ ಗೌರವಗಳೊಂದಿಗೆ ಶ್ವಾನ ಅಂತ್ಯ ಸಂಸ್ಕಾರ ಮಾಡಿಸುವಂತೆ ಶ್ವಾನ ಯಜಮಾನ ಅರ್ಜುನ್ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ : ಹಾವೇರಿ: ವಿಷಕಾರಿ ಹಾವುಗಳಿಂದ ಕೂಲಿ ಕಾರ್ಮಿಕರನ್ನು ರಕ್ಷಿಸುತ್ತಿರುವ ಶ್ವಾನ!