ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು 96 ಜನರಿಗೆ ಕೊರೊನಾ ಸೋಂಕು ತಗುಲಿದೆ.
ಇಂದಿನ ಕೋವಿಡ್ ವಿವರ :
ಚಿಕ್ಕಬಳ್ಳಾಪುರ 21, ಬಾಗೇಪಲ್ಲಿ 8, ಚಿಂತಾಮಣಿ 18, ಗೌರಿಬಿದನೂರು 25, ಗುಡಿಬಂಡೆ 4, ಶಿಡ್ಲಘಟ್ಟ 20 ಸೋಂಕಿತರು ದೃಢಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6,959 ಕ್ಕೆ ಏರಿಕೆಯಾಗಿದೆ.
ಗುಣಮುಖ :
ಇನ್ನೂ ಚಿಕ್ಕಬಳ್ಳಾಪುರ 5, ಚಿಂತಾಮಣಿ 3, ಗುಡಿಬಂಡೆ 1, ಶಿಡ್ಲಘಟ್ಟ 1 ಹಾಗೂ ಗೌರಿಬಿದನೂರಿನಲ್ಲಿ 3 ಸೋಂಕಿತರು ಸಂಪೂರ್ಣ ಗುಣಮುಖಗೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇವರೆಗೆ ಒಟ್ಟು ಗುಣಮುಖಗೊಂಡವರ ಸಂಖ್ಯೆ 5,726 ಕ್ಕೆ ಏರಿಕೆಯಾಗಿದೆ.
ಮೃತರ ಮಾಹಿತಿ :
ಇನ್ನೂ ಚಿಕ್ಕಬಳ್ಳಾಪುರ ಮೂಲದ 40 ವರ್ಷದ ಮಹಿಳೆ ಹಾಗೂ 65 ವರ್ಷದ ಪುರುಷ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಮೃತರ ಸಂಖ್ಯೆ 83 ಕ್ಕೆ ಏರಿಕೆಯಾಗಿದೆ.