ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು 90 ಸೊಂಕಿತರು ಪತ್ತೆಯಾಗಿದ್ದಾರೆ.
ಚಿಕ್ಕಬಳ್ಳಾಪುರ 23, ಚಿಂತಾಮಣಿ 13, ಗೌರಿಬಿದನೂರು 12, ಬಾಗೇಪಲ್ಲಿ 28 ಹಾಗೂ ಗುಡಿಬಂಡೆಯಲ್ಲಿ 5, ಶಿಡ್ಲಘಟ್ಟ 9 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಕಿತರ ಸಂಖ್ಯೆ 3408 ಕ್ಕೆ ಏರಿಕೆಯಾಗಿದೆ.
ಗುಣಮುಖರಾದವರ ವಿವರ:
ಇನ್ನು ಚಿಂತಾಮಣಿ 20 ಸೋಕಿತರು, ಚಿಕ್ಕಬಳ್ಳಾಪುರ 7, ಬಾಗೇಪಲ್ಲಿ 1, ಶಿಡ್ಲಘಟ್ಟ 9, ಗೌರಿಬಿದನೂರು 5 ಹಾಗೂ ಗುಡಿಬಂಡೆ ವ್ಯಾಪ್ತಿಯಲ್ಲಿ 5 ಸೋಕಿತರು ಸಂಪೂರ್ಣ ಗುಣಮುಖರಾಗಿದ್ದು, ಈ ಮೂಲಕ ಇಂದು 43 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮೃತಪಟ್ಟವವರ ವಿವರ:
ಇನ್ನು ಜಿಲ್ಲೆಯಲ್ಲಿ ಇಂದು ಚಿಂತಾಮಣಿಯ 70 ವರ್ಷದ ಪುರುಷ ಹಾಗೂ ಬಾಗೇಪಲ್ಲಿ ಮೂಲದ 55 ವರ್ಷದ ಮಹಿಳೆ ಮೃತ ಪಟ್ಟಿದ್ದು, ಒಟ್ಟು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 55 ಕ್ಕೆ ಏರಿಕೆಯಾಗಿದೆ.
ಸದ್ಯ 598 ಸಕ್ರಿಯ ಸೋಂಕಿತರಿಗೆ ಜಿಲ್ಲೆಯ ಐಸೊಲೇಷನ್ ಸೇರಿದಂತೆ ತಾಲೂಕಿನ ಕೊವೀಡ್ ಕೇರ್ ಸೆಂಟರ್, ಹೋಂ ಐಸೋಲೇಷನ್ ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.