ಬಾಗೇಪಲ್ಲಿ : ತಾಲೂಕಿನ ಗೂಳೂರು ಹೋಬಳಿ ಕೊತ್ತೂರು ಗ್ರಾಮದಲ್ಲಿ ಗುಂಪು ಕಟ್ಟಿಕೊಂಡು ಜೂಜಾಡುತ್ತಿದ್ದ ಐವರು ಜೂಜುಕೋರರನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ. ಕೊರೊನಾ ಲಾಕ್ಡೌನ್ ಇದ್ದರೂ ಕೊತ್ತೂರು ಗ್ರಾಮದಲ್ಲಿ ಗುಂಪು ಕಟ್ಟಿಕೊಂಡು ಜೂಜಾಡುತ್ತಿದ್ದ ಐವರು ಜೂಜುಕೋರರನ್ನು ಬಾಗೇಪಲ್ಲಿ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾದ ಸುನಿಲ್‌ಕುಮಾರ್ ಹಾಗೂ ಸಿಬ್ಬಂದಿ ಏಕಾಏಕಿ ದಾಳಿ ನಡೆಸಿ ಬಂಧಿಸಿದ್ದಾರೆ.
ಗೂಳೂರು ಹೋಬಳಿ ಕೊತ್ತೂರು ಗ್ರಾಮದ ಶ್ರೀನಿವಾಸ್, ಚಂದ್ರಪ್ಪ ಮತ್ತು ಬಾಗೇಪಲ್ಲಿ ಪಟ್ಟಣದ ಅಲ್ತಾಫ್ ಬಾಷಾ, ನೂರ್ ಬಾಷಾ, ಖಾದರ್ ಬಾಷಾ ಎಂಬುವರು ಬಂಧಿತರು. ಜೂಜುಕೋರರಿಂದ ಸುಮಾರು 11,800 ರೂ. ನಗದನ್ನು ವಶಪಡಿಸಿಕೊಂಡು, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.